Download Our App

Follow us

Home » ಕಾನೂನು » ಧಾರವಾಡ ಜಿಲ್ಲಾಧಿಕಾರಿ ಸ್ಪಷ್ಟನೆ : DJ ಹಚ್ಚಲು ಯಾವುದೇ ತಕರಾರಿಲ್ಲ / ಆದರೆ ಸೌಂಡ್ ವಿಚಾರದಲ್ಲಿ ಕಾನೂನು ಪಾಲನೆ ಅವಶ್ಯ

ಧಾರವಾಡ ಜಿಲ್ಲಾಧಿಕಾರಿ ಸ್ಪಷ್ಟನೆ : DJ ಹಚ್ಚಲು ಯಾವುದೇ ತಕರಾರಿಲ್ಲ / ಆದರೆ ಸೌಂಡ್ ವಿಚಾರದಲ್ಲಿ ಕಾನೂನು ಪಾಲನೆ ಅವಶ್ಯ

ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ ಗಣೇಶ ಮಂಡಳಗಳು ಅದ್ದೂರಿ ಹಬ್ಬದ ಸಿದ್ಧತೆಯಲ್ಲಿ ತೊಡಗಿವೆ. 

ಮತ್ತೊಂದೆಡೆ ಗಣೇಶನ ಸ್ವಾಗತ ಹಾಗೂ ವಿದಾಯ ಕಾರ್ಯಕ್ರಮಕ್ಕೆ ರಂಗು ತರುವ ಉದ್ದೇಶದಿಂದ ಡಿಜೆ ಗಳನ್ನು ತರಿಸಲು ಅವುಗಳ ಮುಂಗಡ ಬುಕ್ಕಿಂಗ್ ಮಾಡುತ್ತಿದ್ದಾರೆ.

ಡಿಜೆ ಹಚ್ಚಲು ಜಿಲ್ಲಾಡಳಿತ ಅನುಮತಿ ಕೊಡತ್ತೋ ಇಲ್ಲವೋ ಎಂಬ ಗೊಂದಲದಲ್ಲಿ ಇದ್ದವರಿಗೆ ಧಾರವಾಡ ಜಿಲ್ಲಾಧಿಕಾರಿಗಳು ಇಂದು ಸ್ಪಷ್ಟನೆ ನೀಡಿದ್ದಾರೆ. 

ಡಿಜೆ ಹಚ್ಚಲು ಯಾವುದೇ ತಕರಾರಿಲ್ಲ 

ಧಾರವಾಡ ಜಿಲ್ಲಾಧಿಕಾರಿಗಳು ಇಂದು ಪತ್ರಿಕಾಗೋಷ್ಟಿ ನಡೆಸಿ, ಡಿಜೆ ಬಳಕೆ ಬಗ್ಗೆ ಕೆಲವು ಕಟ್ಟುನಿಟ್ಟಿನ ಕ್ರಮದೊಂದಿಗೆ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಕ್ಕೆ ಒಳಪಟ್ಟು ಸೌಂಡ್ ( ಶಬ್ದ ) ನಿಯಂತ್ರಣ ಮಾಡುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.

ತಪ್ಪಿದ್ದಲ್ಲಿ ಕನಿಷ್ಟ ಒಂದು ಲಕ್ಷ ರೂಪಾಯಿ ದಂಡ ವಿಧಿಸುವದಾಗಿ ಎಚ್ಚರಿಸಿದ್ದಾರೆ.

ಬಹಳಷ್ಟು ಶಬ್ದವಾಗುವದರಿಂದ ಮಕ್ಕಳಿಗೆ, ವೃದ್ಧರಿಗೆ, ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಸ್ನೇಹಲ್ ಅವರು ತೀರಾ ಸ್ನೇಹ ಪೂರ್ವಕವಾಗಿ ಹೇಳಿದ್ದಾರೆ.

    ಡಿಜೆ ಹಚ್ಚುವವರು ಯಾವೆಲ್ಲ ಸೂಚನೆ ಪಾಲಿಸಬೇಕು 

ಡಿಜೆಗಳ ಶಬ್ದ ಮಟ್ಟ ಸರ್ವೋಚ್ಚ ನ್ಯಾಯಾಲಯದ ನೀಡಿದ ಮಾನದಂಡದ ಪ್ರಕಾರ ಇರಬೇಕು 

ಸರ್ವೋಚ್ಚ ನ್ಯಾಯಾಲಯದ ಶಬ್ದ ಮಟ್ಟದ ಮಾನದಂಡವೇನು

ಶಬ್ದ ಮಾಲಿನ್ಯದ ಕುರಿತಾದ ಭಾರತದ ಸುಪ್ರೀಂ ಕೋರ್ಟ್‌ನ ತೀರ್ಪುಗಳ ಪ್ರಕಾರ (ಶಬ್ದ ಮಾಲಿನ್ಯ ಸೇರಿದಂತೆ), ಧ್ವನಿವರ್ಧಕವನ್ನು ಬಳಸುವ ಸಾರ್ವಜನಿಕ ಸ್ಥಳದ ಗಡಿಯಲ್ಲಿನ ಶಬ್ದ ಮಟ್ಟವುಪ್ರದೇಶದ ಸುತ್ತುವರಿದ ಮಾನದಂಡಗಳಿಗಿಂತ 10 dB(A) ಅಥವಾ ಗರಿಷ್ಠ ಸಂಪೂರ್ಣ ಮಿತಿ 75 dB(A), ಯಾವುದು ಕಡಿಮೆಯೋ ಅದನ್ನು ಮೀರಬಾರದು ಎಂಬುದನ್ನು ತೀರ್ಪಿನಲ್ಲಿ ಹೇಳಿದೆ.

ಡಿಜೆ ಎಷ್ಟು ಘಂಟೆಗೆ ಬಂದ ಮಾಡಬೇಕು ಅನ್ನೋದರ ಬಗ್ಗೆಯೂ ಸುಪ್ರೀಮ್ ಕೋರ್ಟ್ ತೀರ್ಪಿನಲ್ಲಿ ಉಲ್ಲೇಖ ಮಾಡಿದೆ

ಸುಪ್ರೀಂ ಕೋರ್ಟ್‌ನ ಪ್ರಮುಖ ನಿರ್ದೇಶನದ ಪ್ರಕಾರ ರಾತ್ರಿ 10:00 ರಿಂದ ಬೆಳಿಗ್ಗೆ 6:00 ರವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳು, ಡ್ರಮ್‌ಗಳು, ಹಾರ್ನ್‌ಗಳು ಅಥವಾ ಆಂಪ್ಲಿಫೈಯರ್‌ಗಳನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಆದರೆ ಹಬ್ಬ ಹರಿದಿನಗಳಲ್ಲಿ, ಸ್ಥಳೀಯ ಆಡಳಿತದ ನಿರ್ಧಾರಕ್ಕೆ ಒಳಪಟ್ಟು ಕೆಲ ಘಂಟೆಗಳ ಸಡಿಲು ನೀಡಿದ ಉಧಾಹರಣೆಗಳಿವೆ.

 

 

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ವಿಧಾನಸಭಾ ಕ್ಷೇತ್ರದ ಮೂರು ತಾಲೂಕು ಬರಪೀಡಿತ ಘೋಷಣೆ: ಧಾರವಾಡ ತಾಲೂಕು ನಿರ್ಲಕ್ಷ್ಯ ಆರೋಪ

ನವಲಗುಂದ: ಮಳೆ ಅಭಾವದ ಹಿನ್ನೆಲೆಯಲ್ಲಿ ಸರ್ಕಾರ ಎರಡನೇ ಹಂತದಲ್ಲಿ ರಾಜ್ಯದ 24 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳು

Live Cricket

error: Content is protected !!