Download Our App

Follow us

Home » ಕಾನೂನು » ಆ ದೂರಿನ ಪ್ರತಿ ಇಟ್ಟುಕೊಂಡು ನಡೆಸಿದ್ರು 5 ಲಕ್ಷದ ಡೀಲ್

ಆ ದೂರಿನ ಪ್ರತಿ ಇಟ್ಟುಕೊಂಡು ನಡೆಸಿದ್ರು 5 ಲಕ್ಷದ ಡೀಲ್

ಮೋಸ ಹೋಗಿದ್ದರ ಬಗ್ಗೆ ಈ ಠಾಣೆಗೆ ಬಂದು ನೀವೇನಾದರು ದೂರು ಕೊಟ್ಟರೆ, ನೀವು ಮತ್ತೊಮ್ಮೆ ಮೋಸ ಹೋಗುವದು ಗ್ಯಾರೆಂಟಿ.

ಯಾರನ್ನೋ ದೂರಬೇಕು ಅಂತಮಾತು ಹೇಳುತ್ತಿಲ್ಲ. ಅಲ್ಲಿ ನಡೆದಿರುವ ಸತ್ಯ ಸಂಗತಿಗಳನ್ನು ಕರ್ನಾಟಕ ಫೈಲ್ಸ್ ಬಿಚ್ಚಿಡುತ್ತಿದೆ. 

ಧಾರವಾಡ ಶಹರ ಪೊಲೀಸ್ ಠಾಣೆಯ ವ್ಯವಸ್ಥೆ ಬಹುತೇಕ ಹದಗೆಟ್ಟು ಹೋಗಿದೆ. ಮೋಸ ಹೋಗಿ, ವಂಚನೆಗೆ ಒಳಗಾಗಿಠಾಣೆಗೆ ಬಂದವರಿಗೆ ನ್ಯಾಯ ಸಿಗುವ ಯಾವದೇ ಗ್ಯಾರಂಟಿ ಇಲ್ಲಿ ಸಿಗಲ್ಲ.

ಅಷ್ಟರ ಮಟ್ಟಿಗೆಠಾಣೆಯ ಆಡಳಿತ ಕುಸಿದು ಹೋಗಿದೆ. ಮಾತಾಡಿದರೆ ದುಡ್ಡು ಅನ್ನೋ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿರೋದು ಖಾಕಿ ಮೇಲೆ ಇರೋ ಗೌರವಕ್ಕೆ ಕೆಲವರಿಂದ ಚ್ಯುತಿ ಬಂದಿದೆ. 

ಅಸಲಿಗೆ ಆರೋಪ ಏನು?

ದಿನಾಂಕ 17-01-2023 ರಂದು ಸತೀಶ್ ಎಂಬುವರು, ಸಿಬಿಟಿ ಹತ್ತಿರ ಇರುವ ದನ್ವಂತರಿ ಆಯುರ್ವೇದ ಅಂಗಡಿಯಿಂದ ಔಷಧಿ ಖರೀದಿ ಮಾಡುತ್ತಾರೆ. ಇದಕ್ಕಾಗಿ ಅವರು 1,45,680 ರೂಪಾಯಿ ಹಣ ಪಾವತಿ ಮಾಡುತ್ತಾರೆ. 

ಒಂದೂವರೆ ಲಕ್ಷ ಹಣ ಕೊಟ್ಟು ಖರೀದಿ ಮಾಡಿದ ಆಯುರ್ವೇದ ಔಷಧಿ ನಕಲಿ ಅನ್ನುವದು ಗೊತ್ತಾಗುತ್ತಿದ್ದಂತೆ ಅವರು ಪೊಲೀಸ್ ಠಾಣೆಗೆ ಹೋಗುತ್ತಾರೆ.

ಬಿಳಿ ಹಾಳೆಯ ಮೇಲೆಅಂಗಡಿಯ ಹೆಸರು ಬರೆದು ಮೋಸ ಮಾಡಿದ್ದರ ಬಗ್ಗೆ ವಿಚಾರಣೆ ನಡೆಸುವಂತೆ ಮತ್ತು ನ್ಯಾಯ ಕೊಡಿಸುವಂತೆ ಇನ್ಸಪೆಕ್ಟರ್ ಅವರಿಗೆ ಅರ್ಜಿ ಬರೆದು ಕೊಡುತ್ತಾರೆ.

ಒಂದು ಬಿಳಿ ಹಾಳೆಯಲ್ಲಿ ಬರೆದ ಅರ್ಜಿ 5 ಲಕ್ಷದ ಬಂಪರ ತಂದು ಕೊಡುತ್ತದೆ. ಈ ಹಣ ಅರ್ಜಿಯ ವಿಚಾರಣೆ ನಡೆಸಿದ ಠಾಣೆಯ ಕೆಲವರ ಜೇಬು ತುಂಬಿಸುತ್ತದೆ. 

ಆದರೆ, ಅರ್ಜಿ ಕೊಟ್ಟವರಿಗೆ ಹಣ ವಾಪಸು ಕೊಡಿಸದೇ ತಮ್ಮಲ್ಲಿಯೇ ಹಣ ಹಂಚಿಕೆ ಮಾಡಿಕೊಂಡಿದ್ದಾರೆ ಅನ್ನೋದನ್ನು ಅಲ್ಲಿನ ಪ್ರತಿ ಗೋಡೆಯೂ ಮಾತನಾಡುತ್ತಿವೆ. 

ನಕಲಿ ಔಷಧಿ ಪಡೆದು 1,45,680 ರೂಪಾಯಿ ಕಳೆದುಕೊಂಡಮಹಿಳೆ ಇನ್ನುವರೆಗೂ ಠಾಣೆಗೆ ಅಲೆಯುತ್ತಿದ್ದಾಳೆ.

 

ಧಾರವಾಡ ಶಹರ ಠಾಣೆಯಲ್ಲಿ ಯಾವ ರೀತಿ ಡೀಲ್ ಗಳು ನಡೆಯುತ್ತಿವೆ. ಒಂದು ದಿನದ ಕಮಾಯಿ ಎಷ್ಟಿದೆ, ರೌಡಿ ಶೀಟ ಓಪನ್ ಮಾಡುವದಾಗಿ ಮತ್ತು ತೆಗೆಯುವ ಬಗ್ಗೆ ಕುದುರಿದ ಡೀಲ್ ಗಳು, ಧಾರವಾಡದ ಕಾನೂನು ಸುವ್ಯವಸ್ಥೆಗೆ ದೊಡ್ಡ ಅಪಾಯ ತಂದುಕೊಡುವ  ಸಾಧ್ಯತೆಗಳಿವೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ವಿಧಾನಸಭಾ ಕ್ಷೇತ್ರದ ಮೂರು ತಾಲೂಕು ಬರಪೀಡಿತ ಘೋಷಣೆ: ಧಾರವಾಡ ತಾಲೂಕು ನಿರ್ಲಕ್ಷ್ಯ ಆರೋಪ

ನವಲಗುಂದ: ಮಳೆ ಅಭಾವದ ಹಿನ್ನೆಲೆಯಲ್ಲಿ ಸರ್ಕಾರ ಎರಡನೇ ಹಂತದಲ್ಲಿ ರಾಜ್ಯದ 24 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳು

Live Cricket

error: Content is protected !!