Download Our App

Follow us

Home » ರಾಜಕೀಯ » ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಅದ್ದೂರಿ ಚಾಲನೆ ನೀಡಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಅದ್ದೂರಿ ಚಾಲನೆ ನೀಡಿದ ಶಾಸಕ ವಿನಯ ಕುಲಕರ್ಣಿ

6 ವರ್ಷಗಳ ಕಾಲ ಕ್ಷೇತ್ರದಿಂದ ಹೊರಗೆ ಇದ್ದ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿಯವರು, ಧಾರವಾಡ ಪ್ರವೇಶ ಮಾಡಿದ ಮರುಘಳಿಗೆಯಲ್ಲಿ ಅಭಿವೃದ್ಧಿಯತ್ತ ಗಮನ ಹರಿಸಿದ್ದಾರೆ.

ಧಾರವಾಡ ತಾಲ್ಲೂಕಿನ ನರೇಂದ್ರ ಗ್ರಾಮದ ಸಮಗ್ರ ಅಭಿವೃದ್ಧಿಗೆ ₹11.49 ಕೋಟಿ ಅನುದಾನ ಮಂಜೂರು ಮಾಡಿಸಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ಗ್ರಾಮದ ಮೂಲಸೌಕರ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ಧಿ, ರಸ್ತೆಗಳ ಸುಧಾರಣೆ, ಸಿ.ಸಿ. ಗಟಾರ ಹಾಗೂ ರಸ್ತೆ ನಿರ್ಮಾಣ, ಸಮುದಾಯ ಭವನಗಳ ನಿರ್ಮಾಣ ಹಾಗೂ ಧಾರ್ಮಿಕ ಹಾಗೂ ಸಾರ್ವಜನಿಕ ಸ್ಥಳಗಳ ಅಭಿವೃದ್ಧಿಗೆ ಈ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗುತ್ತಿದೆ.

ಪ್ರಮುಖ ಅನುದಾನ ಹಂಚಿಕೆ ವಿವರ ಇಲ್ಲದೆ

ಕುಂಭಾಪುರ ಕೆರೆ ಸುಧಾರಣೆ ಕಾಮಗಾರಿಗೆ ₹3 ಕೋಟಿ 24 ಲಕ್ಷ

ಮುಮ್ಮಿಗಟ್ಟಿ–ನರೇಂದ್ರ–ಕಲಘಟಗಿ ಜಿಲ್ಲಾ ಮುಖ್ಯ ರಸ್ತೆ ಸುಧಾರಣೆಗೆ ₹3 ಕೋಟಿ

ನರೇಂದ್ರ ಮಂಗಲಗಟ್ಟಿ ಜಿಲ್ಲಾ ಮುಖ್ಯ ರಸ್ತೆ ಸುಧಾರಣೆ: ₹1 ಕೋಟಿ 55 ಲಕ್ಷ

ನರೇಂದ್ರ ಗ್ರಾಮದ ಹಿರೇಕೆರೆ ಸುಧಾರಣೆ: ₹1 ಕೋಟಿ

ನರೇಂದ್ರ ಕ್ರಾಸ್‌ನಿಂದ ಮಳೇಪಜ್ಜನ ಮಠದವರೆಗೆ ರಸ್ತೆ ಸುಧಾರಣೆ: ₹1 ಕೋಟಿ

ನರೇಂದ್ರ ಗ್ರಾಮದ ಎಸ್.ಸಿ. ಕಾಲೋನಿಯಲ್ಲಿ ಸಿ.ಸಿ. ರಸ್ತೆ ನಿರ್ಮಾಣ: ₹50 ಲಕ್ಷ

 

 

ನರೇಂದ್ರ ಗ್ರಾಮದ ಬಂಡೆಮ್ಮನ ದೇವಸ್ಥಾನ ರಸ್ತೆ ಸುಧಾರಣೆ: ₹25 ಲಕ್ಷ

ನರೇಂದ್ರ–ಯಾದವಾಡ ರಸ್ತೆಯಿಂದ ದಾಸನಕೊಪ್ಪವರೆಗೆ ರಸ್ತೆ ಸುಧಾರಣೆ: ₹20 ಲಕ್ಷ

ನರೇಂದ್ರ–ಮಂಗಲಗಟ್ಟಿ ರಸ್ತೆಯಿಂದ ಮುಳಮುತ್ತಲವರೆಗೆ ರಸ್ತೆ ಸುಧಾರಣೆ: ₹20 ಲಕ್ಷ

ನರೇಂದ್ರ ಗ್ರಾಮದ ಎಸ್.ಸಿ. ಕಾಲೋನಿಯಲ್ಲಿ ಸಿ.ಸಿ. ಗಟಾರ ನಿರ್ಮಾಣ: ₹15 ಲಕ್ಷ

ನರೇಂದ್ರ ಗ್ರಾಮದ ಕಲಕಟ್ಟಿ ಬನವಳ್ಳಿ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ: ₹10 ಲಕ್ಷ

ನರೇಂದ್ರ ಗ್ರಾಮದ ಮಸೀದಿ ಕಟ್ಟಡ ನಿರ್ಮಾಣ: ₹5 ಲಕ್ಷ

ನರೇಂದ್ರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ: ₹5 ಲಕ್ಷ

ನರೇಂದ್ರ ಗ್ರಾಮದ ಉಡಚಮ್ಮ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ: ₹5 ಲಕ್ಷ

ನರೇಂದ್ರ ಗ್ರಾಮದಲ್ಲಿ ಗರಡಿಮನೆ ನಿರ್ಮಾಣ: ₹5 ಲಕ್ಷ

ನರೇಂದ್ರ ಗ್ರಾಮದ ಆರೋಗ್ಯ ಉಪಕೇಂದ್ರ ಸುಧಾರಣೆ: ₹4 ಲಕ್ಷ

ನರೇಂದ್ರ ಗ್ರಾಮದ ಸ್ಮಶಾನ ಅಭಿವೃದ್ಧಿ: ₹3.50 ಲಕ್ಷ

ನರೇಂದ್ರ ಗ್ರಾಮದ ಎಸ್.ಸಿ. ಕಾಲೋನಿಯಲ್ಲಿ ಸಮುದಾಯ ಭವನ ದುರಸ್ತಿ: ₹3 ಲಕ್ಷ

ರಸ್ತೆ ಸಂಪರ್ಕ ಕಲ್ಪಿಸುವುದು, ಜಲಮೂಲಗಳ ಸಂರಕ್ಷಣೆಗಾಗಿ ಕೆರೆಗಳ ಅಭಿವೃದ್ಧಿ, ಸಾರ್ವಜನಿಕ ಆರೋಗ್ಯ ರಕ್ಷಣೆಗಾಗಿ ಆರೋಗ್ಯ ಉಪಕೇಂದ್ರ ಸುಧಾರಣೆ ಮತ್ತು ವಿವಿಧ ಸಮಾಜದವರಿಗಾಗಿ ಸಮುದಾಯ ಭವನಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಎಲ್ಲಾ ಕಾಮಗಾರಿಗಳು ಚುರುಕಿನಿಂದ ನಡೆಯುತ್ತಿದ್ದು, ನರೇಂದ್ರ ಗ್ರಾಮದ ಸಮಗ್ರ ಅಭಿವೃದ್ಧಿಗೆ ಇದು ಐತಿಹಾಸಿಕ ಹಾಗೂ ಮಹತ್ವದ ಹೆಜ್ಜೆಯಾಗಿದೆ.

ಈ ಸಂದರ್ಭದಲ್ಲಿ  ಶಿವಲೀಲಾ ವಿನಯ ಕುಲಕರ್ಣಿ, ವೈಶಾಲಿ ಕುಲಕರ್ಣಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅರವಿಂದ ಏಗನಗೌಡರ, ಈಶ್ವರ್ ಶಿವಳ್ಳಿ, ಶಂಕರ ಇಳಗೇರ, ಮಂಜುನಾಥ್ ತಿರಲಾಪುರ್,ಕರೆಪ್ಪ ಮಾದರ,ಆತ್ಮನಂದ ಹುಂಬೇರಿ, ಜಗದೀಶ್ ಸೋಗಿ,ಚನಮಲ್ಲಪ್ಪ ಮೊರಬ, ಬಸವರಾಜ್ ವೆಂಕಟಪುರ, ಬಸವಪ್ರಭು ಹುಂಬೇರಿ, ಕುಮಾರ್ ನಾಡಗೌಡದೇಸಾಯಿ,ಶ್ರೀಶೈಲ್ ಕಾಶೀನಾಟ್ಟಿ ಮುಂತಾದವರು ಉಪಸ್ಥಿತರಿದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ವಿಧಾನಸಭಾ ಕ್ಷೇತ್ರದ ಮೂರು ತಾಲೂಕು ಬರಪೀಡಿತ ಘೋಷಣೆ: ಧಾರವಾಡ ತಾಲೂಕು ನಿರ್ಲಕ್ಷ್ಯ ಆರೋಪ

ನವಲಗುಂದ: ಮಳೆ ಅಭಾವದ ಹಿನ್ನೆಲೆಯಲ್ಲಿ ಸರ್ಕಾರ ಎರಡನೇ ಹಂತದಲ್ಲಿ ರಾಜ್ಯದ 24 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳು

Live Cricket

error: Content is protected !!