Download Our App

Follow us

Home » ಕಾನೂನು » ಧಾರವಾಡದ ಈ ಕಚೇರಿಯಲ್ಲಿ ನಡೆದವು, ಕೋಟಿ ಕೋಟಿ ಡೀಲ್ ! ಕೊಳ್ಳೆ ಹೊಡೆದರು….

ಧಾರವಾಡದ ಈ ಕಚೇರಿಯಲ್ಲಿ ನಡೆದವು, ಕೋಟಿ ಕೋಟಿ ಡೀಲ್ ! ಕೊಳ್ಳೆ ಹೊಡೆದರು….

ಧಾರವಾಡದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕಾನೂನಿನ ಕಣ್ಣಿಗೆ ಮಣ್ಣೇರಚಿ, ದೊಡ್ಡ ಮಟ್ಟದ ದುಡ್ಡು ಮಾಡಿಕೊಂಡಿದ್ದರ ಬಗ್ಗೆ ಸ್ಪೋಟಕ ಸುದ್ದಿಗಳು ಒಂದೊಂದಾಗಿ ಸಾಕ್ಷಿ ಸಮೇತ ಹೊರಬೀಳುತ್ತಿವೆ.

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರು ಜಿಲ್ಲೆಯಿಂದ ಹೊರಗೆ ಮತ್ತು ಕೆಲವು ತಿಂಗಳು ಜೈಲಿನಲ್ಲಿ ಇದ್ದುದನ್ನು ಬಂಡವಾಳ ಮಾಡಿಕೊಂಡ ಸಿಬ್ಬಂದಿ ಹಾಗೂ ಅಧಿಕಾರಿಗಳು ನಡೆಸಿದ ಅವ್ಯವಹಾರಗಳು ಈಗ ಬೆಳಕಿಗೆ ಬರುತ್ತಿವೆ.

ಕೆಲವು ಅಧಿಕಾರಿ, ಸಿಬ್ಬಂದಿಗಳು, ಏನಾದರೂ ಆದರೆ, ಮಂತ್ರಿಗಳ  ಅಪ್ತರು ಬೆನ್ನಿಗೆ ಇದ್ದಾರೆ ಅನ್ನೋದನ್ನ ತೋರಿಸಿ, ಮಾಡಿದ ಕಾನೂನು ಬಾಹಿರ ಕೆಲಸಗಳು ಕೋಟಿ ಕೋಟಿ ಡೀಲ್ ನಡೆದಿದ್ದರ ಬಗ್ಗೆ ಸಾಕ್ಷ ಒದಗಿಸುತ್ತಿವೆ. 

ವಿನಯ ಕುಲಕರ್ಣಿಯವರು ಧಾರವಾಡಕ್ಕೆ ಬರುವ ಮುಂಚೆ ಧಾರವಾಡದ , ಒಂದಿಷ್ಟು    ಸರ್ಕಾರಿ ಕಚೇರಿಗಳಲ್ಲಿ ನಡೆದಿದ್ದ ಕೋಟಿ ಕೋಟಿ ಡೀಲ್ ಗಳ ಬಗ್ಗೆ ಕರ್ನಾಟಕ ಫೈಲ್ಸ್. ಕಾಮ್, ಸರ್ವೆ ನಂಬರ ಸಹಿತ ಸ್ಪೋಟಕ ಸುದ್ದಿಗಳನ್ನು ಹೊರಹಾಕಲಿದೆ.

 

ಧಾರವಾಡದ AC ಕಚೇರಿ, ದಿನ ಬೆಳಗಾದರೆ ಸಾಕು ಡೀಲ್ ಮಾಡುವ ಏಜೆಂಟರ ಅಡ್ಡೆಯಾಗಿ ಮಾರ್ಪಟ್ಟಿತ್ತು.

ಸರ್ಕಾರಿ ಸಂಬಳ ಪಡೆದು, ಸರ್ಕಾರಕ್ಕೆ ದೊಡ್ಡ ಮೋಸ ಮಾಡಿರುವ ಸರ್ಕಾರಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಎರಡು ವರ್ಷದಲ್ಲಿ ಮಾಡಿದ ಹಗರಣಗಳು , ಇತಿಹಾಸದಲ್ಲಿ ನಡೆದಿಲ್ಲ ಅನ್ನೋದನ್ನ ಅಲ್ಲಿಯ ಗೋಡೆಗಳು ಹೇಳುತ್ತವೆ.

 

  “ಸರ್ಕಾರ” ಸರ್ಕಾರಕ್ಕೆ ಮೋಸ

ಪಹಣಿಯಲ್ಲಿ  ಸರ್ಕಾರ ಎಂದು ನಮೂದಾಗಿದ್ದ ಕೇಸಗಳು ಇಲ್ಲಿನ ಟೇಬಲ್ ಗೆ ಬಂದರೆ ಮುಗಿತು, ಇಲ್ಲಿನವರಿಗೆ ಅದು ಹಬ್ಬದೂಟದಷ್ಟೆ ಸಂಭ್ರಮ. ಸಂಬಂದಿಸಿದ ಟೇಬಲ್ ಮೇಲೆ ಅದರ ತೂಕ ಎಷ್ಟು ಅನ್ನೋದು ಮಾಪನವಾಗುತ್ತದೆ.

ಕಾನೂನು ಪ್ರಕಾರ ಮಾಡಲು ಬರದೇ ಇದ್ದರು, ಪಹಣಿಯಲ್ಲಿ ನಮೂದಾಗಿದ್ದ ” ಸರ್ಕಾರ ” ಎಂಬುದನ್ನು ಧಾರಾಳವಾಗಿ ತೆಗೆದು ಹಾಕಿರುವ ಪ್ರಸಂಗಗಳು ನಡೆದಿವೆ.

ಸರ್ಕಾರ ಎಂದು ತೆಗೆಯಲು, ಅಲ್ಲಿನ ಏಜೆಂಟ್ ಗಳು ಹಾಗೂ ಮದ್ಯಸ್ಥಿಕೆ ವಹಿಸುವ ಸಿಬ್ಬಂದಿ, ಕೋಟಿ ರೂಪಾಯಿ ಮೇಲೆ ಮಾತುಗಳನ್ನು ಆರಂಭ ಮಾಡುತ್ತಾರೆ.

 

ಧಾರವಾಡದ AC ಕಚೇರಿಯಲ್ಲಿರುವ ಸಂಬಂಧಿತ ಕೇಸ್ ವರ್ಕರ್ ಸತೀಶ್ ಕರಲಿಂಗಣ್ಣವರ ಎಂಬುವರನ್ನು , ಈ ವಿಷಯದ ಕುರಿತು ಕೇಳಿದರೆ, ಇದೆಲ್ಲ ನನಗೆ ಗೊತ್ತಿಲ್ಲ ಎನ್ನುತ್ತಾರೆ. ಸತೀಶ ಅವರದ್ದು ಸೌಮ್ಯ ಸ್ವಭಾವವೋ,  ಗೊತ್ತಿದ್ದೂ ಗೊತ್ತಿಲ್ಲದಂತೆ ಇದ್ದಾರೋ, ಅಥವಾ ಒತ್ತಡಕ್ಕೆ ಮಣಿದರೋ ಗೊತ್ತಿಲ್ಲ.

ಅದರೆ ಆಗಲಾರದ ಕೆಲಸವಂತೂ ಆಗಿ ಹೋಗಿದೆ. ಸರ್ಕಾರಕ್ಕೆ ದೊಡ್ಡ ಮಟ್ಟದ ವಂಚನೆಯಾಗಿದೆ. 

ಅಷ್ಟಕ್ಕೂ, ಪಹಣಿಯಲ್ಲಿ ಸರ್ಕಾರ ಎಂದು ತೆಗೆಯಲು ,ಧಾರವಾಡದಿಂದ ಕೇವಲ 3 ಕಿಲೋ ಮೀಟರ್ ನಲ್ಲಿರುವ 3 ಎಕರೆಗೆ ಪಡೆದದ್ದು 3 ಕೋಟಿಯಂತೆ……..

ಒಂದೊಂದಾಗಿ ಮುಂದೆ ಬರಲಿದೆ ಸ್ಪೋಟಕ ಸುದ್ದಿ

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿಮ್ಮ ಮುಂದಿನ ಪಯಣ ಮತ್ತಷ್ಟು ಯಶಸ್ವಿಯಾಗಲಿ

ಎನ್ ಶಶಿಕುಮಾರ ಹುಬ್ಬಳ್ಳಿಗೆ ಕಮಿಷನರ್ ಆಗಿ ಬಂದಂತ ಸಮಯದಲ್ಲಿ ಅನೇಕ ಸವಾಲುಗಳು ಅವರ ಬೆನ್ನಿಗೇರಿದ್ದವು.  ಅವರ ಬಗ್ಗೆ, ಅವರ ಕೆಲಸದ ಸ್ಟೈಲ್ ಬಗ್ಗೆ, ಅವರು ಅಧಿಕಾರ ಸ್ವೀಕರಿಸುವದಕ್ಕೂ

Live Cricket

error: Content is protected !!