Download Our App

Follow us

Home » ಕಾನೂನು » ಧಾರವಾಡ ಶಹರ ಪೊಲೀಸ್ ಠಾಣೆ : ಹಣ ಮಾಡಲು ರೌಡಿಶೀಟ ಅಸ್ತ್ರ ಬಳಕೆ : ಕಾಂಗ್ರೇಸ್ಸಿನ ಬೆಂಬಲಿಗರೇ ಟಾರ್ಗೆಟ್

ಧಾರವಾಡ ಶಹರ ಪೊಲೀಸ್ ಠಾಣೆ : ಹಣ ಮಾಡಲು ರೌಡಿಶೀಟ ಅಸ್ತ್ರ ಬಳಕೆ : ಕಾಂಗ್ರೇಸ್ಸಿನ ಬೆಂಬಲಿಗರೇ ಟಾರ್ಗೆಟ್

ಧಾರವಾಡ ಶಹರ ಪೊಲೀಸ್ ಠಾಣೆ, ಪ್ರತಿನಿತ್ಯ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. 

ರೌಡಿಶೀಟರ ಪಟ್ಟಿಯಲ್ಲಿದ್ದು, ಈಗ ಸರಿದಾರಿಗೆ ಬಂದವರನ್ನು ರೌಡಿಶೀಟರ ಪಟ್ಟಿಯಿಂದ ತೆಗೆದು ಹಾಕಲಾಗುವದು ಎಂದು ಕಮಿಷನರ್ ಹೇಳಿದ್ದೆ ತಡ, ಠಾಣೆಯ ಕೆಲ ಸಿಬ್ಬಂದಿ ರೇಟ್ ಫಿಕ್ಸ್ ಮಾಡಲು ಶುರುವಿಟ್ಟುಕೊಂಡ್ರು ಎಂಬ ಆರೋಪ ಕೇಳಿ ಬಂದಿದೆ. 

ದಶಕಗಳಿಂದ ರೌಡಿಶೀಟರ ಪಟ್ಟಿಯಲ್ಲಿದ್ದವರು, ದಿನನಿತ್ಯದ ಜೀವನದಲ್ಲಿ ಸುಧಾರಣೆ ಕಂಡಿದ್ದು, ಅವರಿಗೆ ಮಾನವೀಯತೆ ಆಧಾರದ ಮೇಲೆ ಪೊಲೀಸ್ ಕಮಿಷನರ್, ಒಂದು ಅವಕಾಶ ಕೊಟ್ಟಿದ್ದರು.

ಯಾರು ಸರಿದಾರಿಗೆ ಬಂದಿದ್ದಾರೆ ಅನ್ನೋದನ್ನ ಪರಿಶೀಲಿಸಿ, ರೌಡಿಶೀಟರ ಪಟ್ಟಿಯಿಂದ ತೆಗೆಯಲು ಶಿಫಾರಸು ಮಾಡಿ ಕಳಿಸುವಂತೆ ಮೇಲಾಧಿಕಾರಿಗಳು ಹೇಳಿದ್ದರು. 

ಇದರ ಲಾಭ ಪಡೆದುಕೊಂಡು, ಕೆಲವರಿಂದ 50 ಸಾವಿರ, ಒಂದು ಲಕ್ಷ ಹಣ ಪಡೆದಿದ್ದಾರೆ. ಹೀಗೆ ಒಟ್ಟು ಇನ್ನೂರು ಜನರನ್ನು ಈ ಠಾಣೆಯಿಂದ ತೆಗೆಯಲಾಗಿದೆ ಎಂಬ ಸುದ್ದಿ ಇದೆ. 

ಅಷ್ಟು ಹಣ ಕೊಡಲು ಆಗದವರನ್ನು ಪಟ್ಟಿಯಲ್ಲಿ ಮುಂದುವರೆಸಲಾಗಿದೆ ಎಂದು ಕೆಲ ಹಳಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಠಾಣೆಯ ಸರಹದ್ದು, ಬಹುತೇಕ ಧಾರವಾಡ ಗ್ರಾಮೀಣ ವಿಧಾನಸಭಾ ಮತಕ್ಷೇತ್ರಕ್ಕೆ ಒಳಪಡುತ್ತದೆ.

ಕಾಂಗ್ರೇಸ್ಸಿಗೆ ಬೆನ್ನೆಲುಬಾಗಿ ನಿಂತ ಒಂದು ಸಮುದಾಯದ ಯುವಕರನ್ನು ಬೇಕಂತಲೇ ಈ ಠಾಣೆಯ ಎಸ್ ಬಿ ಮತ್ತು ಕ್ರೈಮ್ ಟೀಮ್ ಕಾಡಿದೆಯಂತೆ. 

ಇನ್ನು ಕೆಲವರಿಗೆ, ಹೇಳಿದಂತೆ ಕೇಳದೆ ಹೋದರೆ ರೌಡಿಶೀಟರ ಪಟ್ಟಿಯಲ್ಲಿ ಸೇರಿಸುತ್ತೇವೆ ಎಂಬ ಧಮಕಿ ಬೇರೆ ಹಾಕಿದ್ದಾರೆ.

ಈಗ ಅವರೆಲ್ಲ ಬಾರಾಕೊಟ್ರಿಯ ಬಾಗಿಲು ತಟ್ಟಲು ಸಜ್ಜಾಗಿದ್ದಾರೆ. ವಿನಯ ಕುಲಕರ್ಣಿಯವರ ಹತ್ತಿರ ನ್ಯಾಯ ಕೇಳಲು ಹೊರಟಿದ್ದಾರೆ. 

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿಮ್ಮ ಮುಂದಿನ ಪಯಣ ಮತ್ತಷ್ಟು ಯಶಸ್ವಿಯಾಗಲಿ

ಎನ್ ಶಶಿಕುಮಾರ ಹುಬ್ಬಳ್ಳಿಗೆ ಕಮಿಷನರ್ ಆಗಿ ಬಂದಂತ ಸಮಯದಲ್ಲಿ ಅನೇಕ ಸವಾಲುಗಳು ಅವರ ಬೆನ್ನಿಗೇರಿದ್ದವು.  ಅವರ ಬಗ್ಗೆ, ಅವರ ಕೆಲಸದ ಸ್ಟೈಲ್ ಬಗ್ಗೆ, ಅವರು ಅಧಿಕಾರ ಸ್ವೀಕರಿಸುವದಕ್ಕೂ

Live Cricket

error: Content is protected !!