Download Our App

Follow us

Home » ಕಾನೂನು » ವಿಜಯಪುರ ಜಿಲ್ಲೆಯಲ್ಲಿ 20 ಕ್ಕೂ ಹೆಚ್ಚು ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭ / ಎಮ್ ಬಿ ಪಾಟೀಲ

ವಿಜಯಪುರ ಜಿಲ್ಲೆಯಲ್ಲಿ 20 ಕ್ಕೂ ಹೆಚ್ಚು ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭ / ಎಮ್ ಬಿ ಪಾಟೀಲ

 

 

2025-2026 ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ಅನುದಾನ ಹಾಗೂ ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್ ಸಾಲ ಯೋಜನೆಯಡಿ ವಿಜಯಪುರ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಶಾಲೆಗಳು ಕೆಪಿಎಸ್ ಶಾಲೆಗಳಾಗಿ ಉನ್ನತೀಕರಣಗೊಳ್ಳಲಿದೆ ಎಂದು ಸಚಿವ ಎಮ್ ಬಿ ಪಾಟೀಲ ಅವರು ತಿಳಿಸಿದ್ದಾರೆ.

ಮುದ್ದೇಬಿಹಾಳದಲ್ಲಿ 5, ಬಸವನಬಾಗೇವಾಡಿಯಲ್ಲಿ -4,  ಇಂಡಿಯಲ್ಲಿ 3, ಸಿಂದಗಿಯಲ್ಲಿ -3, ವಿಜಯಪುರ ಗ್ರಾಮಾಂತರದಲ್ಲಿ 1, ವಿಜಯಪುರ ನಗರದಲ್ಲಿ 2, ಚಡಚಣದಲ್ಲಿ 1, ನಾಗಠಾಣದಲ್ಲಿ  1 ಹೀಗೆ 20 ಶಾಲೆಗಳು ಕೆಪಿಎಸ್ ಶಾಲೆಗಳಾಗಿ ಉನ್ನತೀಕರಣಗೊಳ್ಳಲಿದೆ ಎಂದು ಅವರು ಟ್ವಿಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಸಿದ್ದರಾಮಯ್ಯ ಸರ್ಕಾರದಲ್ಲಿ ಬಾಬಾನಗರ, ಅರ್ಜುಣಗಿ, ಮಮದಾಪುರ ಸೇರಿದಂತೆ ಒಟ್ಟು 5 ಶಾಲೆಗಳು KPS ಶಾಲೆಗಳಾಗಲಿವೆ. 

ಪ್ರತಿ ಶಾಲೆಗೂ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸಲಾಗುವುದು. ಜೊತೆಗೆ ಉಚಿತ ಸಾರಿಗೆ ವ್ಯವಸ್ಥೆಯನ್ನೂ ಕಲ್ಪಿಸಿ, ಮಕ್ಕಳನ್ನು ಶಾಲೆಗಳಿಗೆ ಆಕರ್ಷಿಸಲಾಗುವುದು. ಶಿಕ್ಷಣವೇ ಶಕ್ತಿ ಎಂಬುದನ್ನು ಕೇವಲ ಘೋಷವಾಖ್ಯವಾಗಿಸದೆ ಅದನ್ನು ಅನುಷ್ಠಾನಗೊಳಿಸುವತ್ತ ಬದ್ಧತೆಯಿಂದ ನಮ್ಮ ಸರ್ಕಾರ ಮುನ್ನಡೆಯುತ್ತಿದೆ ಎಂದು ಎಮ್ ಬಿ ಪಾಟೀಲರು ತಿಳಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!