Download Our App

Follow us

Home » ಕಾನೂನು » ದಿವಂಗತ ಮಹಾಂತೇಶ ಬೀಳಗಿ ಕುಟುಂಬದ ಒಬ್ಬರಿಗೆ ಕ್ಲಾಸ್ 1 ಹುದ್ದೆ ನೀಡಿ / ಸಿ ಎಮ್ ಗೆ ಪತ್ರ ಬರೆದ ವಿಜಯೇಂದ್ರ

ದಿವಂಗತ ಮಹಾಂತೇಶ ಬೀಳಗಿ ಕುಟುಂಬದ ಒಬ್ಬರಿಗೆ ಕ್ಲಾಸ್ 1 ಹುದ್ದೆ ನೀಡಿ / ಸಿ ಎಮ್ ಗೆ ಪತ್ರ ಬರೆದ ವಿಜಯೇಂದ್ರ

ಹಿರಿಯ IAS ಅಧಿಕಾರಿ ಮಹಾಂತೇಶ್ ಬೀಳಗಿಯವರ ಅಕಾಲಿಕ ನಿಧನದಿಂದ ಕುಟುಂಬದ ಕಣ್ಣೀರು ಒರೆಸಿ, ಸಾಂತ್ವನ ಹೇಳುವುದರ ಜೊತೆಗೆ ಕುಟುಂಬದ ಒಬ್ಬರಿಗೆ ಕ್ಲಾಸ್ 1 ದರ್ಜೆಯ ಹುದ್ದೆ ನೀಡುವಂತೆ ಬಿ ವೈ ವಿಜಯೇಂದ್ರ, ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. 

ಈ ಹಿಂದೆ ಇಂತಹ ಸಂದರ್ಭಗಳಲ್ಲಿ ಅಗಲಿದ ಅಧಿಕಾರಿಗಳ ಕುಟುಂಬ ವರ್ಗದವರಿಗೆ ಅಧಿಕಾರಿ ಹುದ್ದೆಯನ್ನು ನೀಡಿದ ಹಲವು ನಿದರ್ಶನಗಳಿದ್ದು, ಅದಕ್ಕೆ ಅನುಗುಣವಾಗಿ ಬೀಳಗಿಯವರ ಕುಟುಂಬದ ಸದಸ್ಯರೊಬ್ಬರಿಗೆ ಕ್ಲಾಸ್-1 ಅಧಿಕಾರಿ ಹುದ್ದೆ ನೀಡುವಂತೆ ಆಗ್ರಹಿಸಿದ್ದಾರೆ.

ಇದನ್ನು ವಿಶೇಷ ಪ್ರಕರಣವೆಂದು ರಾಜ್ಯ ಸರ್ಕಾರ ಪರಿಗಣಿಸಬೇಕು ಎಂದು ಮನವಿ ಮಾಡಿರುವ ಅವರು, ರಾಜ್ಯ ಸರ್ಕಾರ ಶೀಘ್ರದಲ್ಲಿ ಇದಕ್ಕೆ ಪೂರಕವಾಗಿ ಮಾನವೀಯ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ನಿರೀಕ್ಷಿಸುತ್ತೇನೆ ಎಂದಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಸರ್ವತೋಮುಖ ಅಭಿವೃದ್ಧಿಗೆ ಹೊಸ ಭಾಷ್ಯ – ಶಾಸಕ ವಿನಯ ಕುಲಕರ್ಣಿ ಶ್ಲಾಘನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ 2026-27ನೇ ಸಾಲಿನ ರಾಜ್ಯ ಬಜೆಟ್ ಅತ್ಯಂತ ಆಶಾದಾಯಕವಾಗಿದ್ದು, ಇದು ಕರ್ನಾಟಕದ ಆರ್ಥಿಕ ಶಕ್ತಿಯನ್ನು ಜಗತ್ತಿಗೆ ಸಾರುವಂತಿದೆ ಎಂದು ಧಾರವಾಡ ಶಾಸಕರು

Live Cricket

error: Content is protected !!