Download Our App

Follow us

Home » ಶಿಕ್ಷಣ » ನಾಳೆ ಹುಬ್ಬಳ್ಳಿಯಲ್ಲಿ ಸನಾ ಶಾಹಿನ್ ಟ್ಯಾಲೆಂಟ್ ಸರ್ಚ್ ಪರೀಕ್ಷೆ

ನಾಳೆ ಹುಬ್ಬಳ್ಳಿಯಲ್ಲಿ ಸನಾ ಶಾಹಿನ್ ಟ್ಯಾಲೆಂಟ್ ಸರ್ಚ್ ಪರೀಕ್ಷೆ

ಹುಬ್ಬಳ್ಳಿಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾಗಿರುವ ಸನಾ ಶಾಹಿನ್ ಸಂಸ್ಥೆ ಹತ್ತನೇ ತರಗತಿ ಮಕ್ಕಳಿಗೆ ಟ್ಯಾಲೆಂಟ್ ಸರ್ಚ್ ಪರೀಕ್ಷೆ ಏರ್ಪಡಿಸಿದೆ. 

ಭೈರಿದೇವರಕೊಪ್ಪದಲ್ಲಿರುವ ಸನಾ ಶಾಹೀನ ಕಾಲೇಜಿನಲ್ಲಿ ಮಕ್ಕಳಿಗೆ ಸ್ಪರ್ಧಾತ್ಮಕ ಜಗತ್ತಿಗೆ ಆಕರ್ಷಿಸಲು ಈ ಪರೀಕ್ಷೆ ನಡೆಸಲಾಗುತ್ತಿದೆ.

ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎ. ಎಂ. ಖಾನ್ ಅವರ ಮಾರ್ಗದರ್ಶನದಲ್ಲಿ ಸನಾ ಶಾಹೀನ್ ಟ್ಯಾಲೆಂಟ್ ಸರ್ಚ್ ಪರೀಕ್ಷೆ 2025 ಅನ್ನು ಘೋಷಿಸಿದೆ. 

10ನೇ ತರಗತಿಯ ವಿದ್ಯಾರ್ಥಿಗಳು ಧೈರ್ಯದಿಂದ ಪಾಲ್ಗೊಳ್ಳುವಂತೆ ಕರೆ ನೀಡಲಾಗಿದ್ದು, ಈ ಟ್ಯಾಲೆಂಟ್ ಸರ್ಚ್ ಪರೀಕ್ಷೆ ಭವಿಷ್ಯದ ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಸಿದ್ಧಗೊಳಿಸುವ ಮಹತ್ವದ ಹೆಜ್ಜೆಯಾಗಿದೆ.

ಈ ಪರೀಕ್ಷೆ ಡಿಸೆಂಬರ್ 7, 2025 ರ ಭಾನುವಾರ, ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ ನಡೆಯಲಿದೆ.

ಭೈರಿದೇವರಕೊಪ್ಪ ಶಾಂತಿನಿಕೇತನದಲ್ಲಿರುವ ಸನಾ ಶಾಹೀನ್ ಪಿಯು ಕಾಲೇಜ್ ಸೇರಿದಂತೆ    ಸವಣೂರು, ಬಂಕಾಪುರ, ಗದಗ, ಹಿರೇಕೆರೂರು, ಹಾನಗಲ್,ಕನವಳ್ಳಿ, ಹಳಿಯಾಳ ಮತ್ತು ದಾಂಡೇಲಿ ಸೇರಿದಂತೆ ಹಲವು ಸ್ಥಳಗಳಲ್ಲಿ ಹೆಚ್ಚುವರಿ ಕೇಂದ್ರಗಳಲ್ಲಿ   ಪರೀಕ್ಷೆಗೆ  ವ್ಯವಸ್ಥೆ ಮಾಡಲಾಗಿದೆ. 

ಪ್ರಶ್ನೆ ಪತ್ರಿಕೆ ಕನ್ನಡ, ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ ಲಭ್ಯವಿರುತ್ತದೆ ಎಂದು ಅಧ್ಯಕ್ಷರಾದ ಎಂ, ಎಂ. ಮಳಗಿ, ವ್ಯವಸ್ಥಾಪಕ ಟ್ರಸ್ಟಿ ಅಶ್ರಫ್ ಅಲಿ, ಬಶೀರ ಅಹಮದ್, ಟ್ರಸ್ಟಿಗಳಾದ ಮೊಹಮ್ಮದ್ ಆಯೂಬ್ ಸವಣೂರು, ತಾರಿಕ್ ಮುಜಾಹಿದ್, ಸರ್ಫರಾಝ್ ಅತ್ತಾರ್ ತಿಳಿಸಿದ್ದಾರೆ.

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!