Download Our App

Follow us

Home » ಭಾರತ » ಆಂಧ್ರಪ್ರದೇಶದಲ್ಲಿ ರೈಲಿಗೆ ಬೆಂಕಿ ಓರ್ವ ಸಾವು

ಆಂಧ್ರಪ್ರದೇಶದಲ್ಲಿ ರೈಲಿಗೆ ಬೆಂಕಿ ಓರ್ವ ಸಾವು

ಇಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಎಲಮಂಚಿಲಿ ನಿಲ್ದಾಣದ ಬಳಿ ರೈಲು ಸಂಖ್ಯೆ 18189 ಟಾಟಾನಗರ–ಎರ್ನಾಕುಲಂ ಎಕ್ಸ್‌ಪ್ರೆಸ್‌ನ ಮೂರು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. 

ರೈಲು ಭೋಗಿಗಳು ಬೆಂಕಿಗೆ ಆಹುತಿಯಾದ ಪರಿಣಾಮ ಒಬ್ಬ ಪ್ರಯಾಣಿಕ ಸಾವನ್ನಪ್ಪಿದ್ದಾನೆ. ಮೃತರನ್ನು ಚಂದ್ರಶೇಖರ ಸುಂದರ (70) ಎಂದು ಗುರುತಿಸಲಾಗಿದೆ. 

ಮೊದಲಿಗೆ ಬಿ1 ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ರಮೇಣ ಅದು ಹರಡುತ್ತಾ ಎಂ1 ಮತ್ತು ಬಿ2 ಗೆ ವ್ಯಾಪಿಸಿದೆ. 

ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದ ಲೋಕೊ ಪೈಲೆಟ್ ರೈಲು ನಿಲ್ಲಿಸಿ ನಡೆಯಬಹುದಾದ ದೊಡ್ಡ ದುರಂತವನ್ನು ತಪ್ಪಿಸಿದ್ದಾನೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಶಾಕೀರ ಸನದಿ ಮುಂದುವರಿಕೆ

ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಶಾಕೀರ ಸನದಿಯವರನ್ನು ಮುಂದುವರೆಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಹುಡಾ ಜೊತೆ ಗದಗ, ಹಾವೇರಿ, ಬೆಳಗಾವಿ

Live Cricket

error: Content is protected !!