Download Our App

Follow us

Home » ಕಾನೂನು » ಧಾರವಾಡದ ಆ ಎರಡು ಪೊಲೀಸ್ ಠಾಣೆಗಳು…..

ಧಾರವಾಡದ ಆ ಎರಡು ಪೊಲೀಸ್ ಠಾಣೆಗಳು…..

ಧಾರವಾಡದ ಆ ಎರಡು ಪೊಲೀಸ್ ಠಾಣೆಗಳಿಗೆ ಏನಾಗಿದೆಯೋ ಗೊತ್ತಿಲ್ಲ. ಯಾವ ಇನ್ಸಪೆಕ್ಟರ್ ಗಳು ಈ ಠಾಣೆಗಳಿಗೆ ಬರುತ್ತಿಲ್ಲ. 

ಧಾರವಾಡದ ಉಪನಗರ ಪೊಲೀಸ್ ಠಾಣೆ ಹಾಗೂ ಶಹರ ಪೊಲೀಸ್ ಠಾಣೆಗಳಲ್ಲಿನ ಇನ್ಸಪೆಕ್ಟರ್ ಗಳು ವರ್ಗಾವಣೆ ಆಗಿ ಹೋದ ನಂತರ ಪ್ರಭಾರಿ ಇನ್ಸಪೆಕ್ಟರ್ ಗಳನ್ನು ಇಲ್ಲಿ ನಿಯೋಜಿಸಲಾಗಿದೆ. 

ಧಾರವಾಡ ಶಹರ ಠಾಣೆಗೆ ಅಲಿ ಶೇಖ್ ಹಾಗೂ ಉಪನಗರ ಪೊಲೀಸ್ ಠಾಣೆಗೆ ಪ್ರಭು ಗಂಗೇನಹಳ್ಳಿಯವರು ಪ್ರಭಾರಿಯಾಗಿ ಅಧಿಕಾರ ನಡೆಸಿದ್ದಾರೆ. 

ಇಲ್ಲಿ ಬರಲು ಅದ್ಯಾವ ಸಮಸ್ಯೆಯಾಗಿದೆಯೋ ಏನೋ, ಇಲ್ಲಿಗೆ ಬರಲು ಒಂದು ಕಾಲದಲ್ಲಿ ಪೈಪೋಟಿ ನಡೆಯುತ್ತಿತ್ತು. ಆದರೆ ಇದೀಗ ಇಲ್ಲಿಗೆ ಇನ್ಸಪೆಕ್ಟರ್ ಆಗಿ ಬರಲು ಯಾರು ಬಯಸುತ್ತಿಲ್ಲ ಎನ್ನಲಾಗಿದೆ. 

ಕೆಲಸದ ಒತ್ತಡದ ಮಧ್ಯೆ ಪ್ರಭು ಗಂಗೇನಹಳ್ಳಿಯವರು ಹಾಗೂ ಅಲಿ ಶೇಖ್ ಅವರು ಪ್ರಭಾರಿ ಹುದ್ದೆಯಲ್ಲಿಯೇ ಕಾನೂನು ಸುವ್ಯವಸ್ಥೆಯಲ್ಲಿ ತೊಡಗಿದ್ದಾರೆ. 

ಮೂರು ತಿಂಗಳಿನಿಂದ ಇವೆರಡು ಠಾಣೆಗಳಲ್ಲಿ ಪೂರ್ಣಕಾಲಿಕ ಇನ್ಸಪೆಕ್ಟರಗಳು ಬರದೇ ಇರುವದು ಸೋಜಿಗ ಮೂಡಿಸಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನ್ಯೂ ಕಮಿಷನರ್ ಸೈಲೆಂಟ್ ಸ್ಟ್ರೋಕ್ : ಅವಳಿ ನಗರದಲ್ಲಿ ಅಸಲಿ ಖಾಕಿ ಖದರ್ ಶುರು….

ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯಲ್ಲಿ ಚಾಕು ಇರಿತ ಪ್ರಕರಣಗಳನ್ನು ಹತ್ತಿಕ್ಕಲು ಹೊಸದಾಗಿ ಬಂದಿರುವ ಪೊಲೀಸ್ ಕಮಿಷನರ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಅವಳಿ ನಗರದಲ್ಲಿ ಚಾಕು, ತಲ್ವಾರ್ ಸೇರಿದಂತೆ ಮಾರಕಾಸ್ತ್ರಗಳನ್ನು

Live Cricket

error: Content is protected !!