Download Our App

Follow us

Home » ಹಬ್ಬಗಳು » ಉತ್ತರ ಕರ್ನಾಟಕದಲ್ಲಿ ಸಂಕ್ರಾಂತಿ ಸೂತಕ : 6 ಜನರ ಸಾವು

ಉತ್ತರ ಕರ್ನಾಟಕದಲ್ಲಿ ಸಂಕ್ರಾಂತಿ ಸೂತಕ : 6 ಜನರ ಸಾವು

ಸಂಕ್ರಾಂತಿ ವೇಳೆ ಉತ್ತರ ಕರ್ನಾಟಕದಲ್ಲಿ ಒಟ್ಟು 6 ಜನ ಮೃತಪಟ್ಟಿದ್ದಾರೆ. 

ಬಾಗಲಕೋಟ, ಹಾವೇರಿ, ಉತ್ತರ ಕನ್ನಡ ಹಾಗೂ ರಾಯಚೂರಿನಲ್ಲಿ ಸಂಕ್ರಾಂತಿ ಸೂತಕವಾಗಿದೆ. 

ಬಾಗಲಕೋಟೆಯಲ್ಲಿ ಮನೋಜ ಬಡಿಗೇರ, ಪ್ರಮೋದ ಬಡಿಗೇರ ಎಂಬುವರು ಸ್ನಾನ ಮಾಡುವ ಸಂದರ್ಭದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ದಾಂಡೇಲಿಯ ಮೌಳಂಗಿ ಸಮೀಪ ನವಾಜ್ ನಾಯ್ಕ ಎಂಬಾತ ಸಾವನ್ನಪ್ಪಿದ್ದಾನೆ. 

ಮಾನ್ವಿ ತಾಲೂಕಿನ ಸಮೀಪ ತುಂಗಭದ್ರಾ ನದಿಯಲ್ಲಿ ವಂಶಿ ರೆಡ್ಡಿ ಎಂಬಾತ ಮುಳುಗಿ ಸಾವನ್ನಪ್ಪಿದ್ದಾನೆ.

ಹಾವೇರಿಯ ವರದಾ ನದಿಯಲ್ಲಿ ಬಸವರಾಜ ಅಂಗಡಿ ಎಂಬ ಯುವಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಇತ್ತ ಧಾರವಾಡದ ಯರಿಕೊಪ್ಪದ ಬಳಿ ಸಂಕ್ರಾಂತಿ ಹಬ್ಬಕ್ಕೆ ಹೊರಟಿದ್ದ ಕಾರು ಪಲ್ಟಿಯಾದ ಪರಿಣಾಮ ಕಾರಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 

ಒಟ್ನಲ್ಲಿ 2026 ರ ಸಂಕ್ರಾಂತಿ ಉತ್ತರ ಕರ್ನಾಟಕದಲ್ಲಿ ಸೂತಕದ ಛಾಯೆ ಮೂಡಿಸಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!