Download Our App

Follow us

Home » ರಾಜಕೀಯ » ಪಶ್ಚಿಮ ಪದವೀಧರ ಚುನಾವಣೆ : ಕಾಂಗ್ರೇಸ್ ಅಭ್ಯರ್ಥಿ ಬದಲಾವಣೆಗೆ ಆಗ್ರಹ

ಪಶ್ಚಿಮ ಪದವೀಧರ ಚುನಾವಣೆ : ಕಾಂಗ್ರೇಸ್ ಅಭ್ಯರ್ಥಿ ಬದಲಾವಣೆಗೆ ಆಗ್ರಹ

ನವೆಂಬರ್ ತಿಂಗಳಲ್ಲಿ ನಡೆಯಲಿರುವ ಪಶ್ಚಿಮ ಪದವೀಧರ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದು, ಅಭ್ಯರ್ಥಿಯನ್ನು ಬದಲಾಯಿಸಿ ಮೂಲ ಕಾಂಗ್ರೇಸ್ಸಿಗರಿಗೆ ನೀಡುವಂತೆ ಟಿಕೇಟ್ ಆಕಾಂಕ್ಷಿಯಾಗಿದ್ದ ಡಾ, ಸಲೀಮ್ ಸೊನ್ನೆಖಾನ ಆಗ್ರಹಿಸಿದ್ದಾರೆ.

ಘೋಷಿತ ಅಭ್ಯರ್ಥಿ ಮೋಹನ ಲಿಂಬಿಕಾಯಿಯವರು ಕಾಂಗ್ರೇಸ್ಸಿಗೆ ವಲಸೆ ಬಂದ ಎರಡು ವರ್ಷಗಳಲ್ಲಿಯೆ ಅವರಿಗೆ ಟಿಕೇಟ್ ನೀಡಿದ್ದು, ಬೇಸರವಾಗಿದೆ ಎಂದು ಹೈಕಮಾಂಡ ಗಮನಕ್ಕೆ ತಂದಿದ್ದಾರೆ.

ಆರ್ ಎಮ್ ಕುಬೇರಪ್ಪ, ಬಸವರಾಜ ಗುರಿಕಾರ ಸೇರಿದಂತೆ ಬಹುತೇಕ ಆಕಾಂಕ್ಷಿಗಳಿಗೆ ಪಕ್ಷದ ನಿರ್ಧಾರ ತೃಪ್ತಿ ನೀಡಿಲ್ಲ ಎಂದು ಎ ಐ ಸಿ ಸಿ ಕಾರ್ಯದರ್ಶಿ ಮಯೂರಾ ಜಯಕುಮಾರ ಅವರಿಗೆ ಪತ್ರ ಮುಖೇನ ಅಸಮಾಧಾನ ಹೊರಹಾಕಿದ್ದಾರೆ.

ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಾಗಿ 25 ವರ್ಷಗಳ ಕಾಲ ದುಡಿದಿರುವ ಮೂಲ ಕಾಂಗ್ರೇಸ್ಸಿನ ಆಕಾಂಕ್ಷಿಗಳಿಗೆ ಟಿಕೇಟ್ ನೀಡಬೇಕೆಂದು ಸೊನ್ನೆಖಾನ ಆಗ್ರಹಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಶಾಕೀರ ಸನದಿ ಮುಂದುವರಿಕೆ

ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಶಾಕೀರ ಸನದಿಯವರನ್ನು ಮುಂದುವರೆಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಹುಡಾ ಜೊತೆ ಗದಗ, ಹಾವೇರಿ, ಬೆಳಗಾವಿ

Live Cricket

error: Content is protected !!