ಧಾರವಾಡದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಧಾರವಾಡ ಕೃಷಿ ವಿವಿ ಎದುರು ಇರುವ ಸಾಧೂನವರ ಲೇಔಟ್ ನಲ್ಲಿ ಬಾಲಕನ ಮೇಲೆ ಎಗರಿದ ಬೀದಿ ನಾಯಿಗಳು ಬಾಲಕನನ್ನು ಗಂಭೀರವಾಗಿ ಗಾಯಗೊಳಿಸಿವೆ.
ಬಾಲಕನ ಕಿವಿ ಕತ್ತರಿಸಿರುವ ಬೀದಿ ನಾಯಿಗಳು ಇನ್ನೇನು ಕುತ್ತಿಗೆಗೆ ಬಾಯಿ ಹಾಕಿದಾಗ ಅಲ್ಲಿದ್ದವರು ಕೂಡಲೇ ಧಾವಿಸಿ ಬಾಲಕನನ್ನು ರಕ್ಷಿಸಿದ್ದಾರೆ.
ಗಾಯಗೊಂಡ ಬಾಲಕನನ್ನು ಜಿಲ್ಲಾಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಎಸ್ ಡಿ ಎಮ್ ಆಸ್ಪತ್ರೆಗೆ ಧಾಖಲು ಮಾಡಲಾಗಿದೆ.
ಗಾಯಗೊಂಡ ಬಾಲಕನಿಗೆ ಉತ್ತಮ ಚಿಕಿತ್ಸೆ ಕೊಡಿಸುವ ಮೂಲಕ ಜಿಲ್ಲಾಡಳಿತ ಹಾಗೂ ಪಾಲಿಕೆ ಬಾಲಕನ ಚಿಕಿತ್ಸಾ ವೆಚ್ಚವನ್ನು ಭರಿಸಬೇಕಿದೆ.
ಕರ್ನಾಟಕ ಫೈಲ್ಸ್ ಬಾಲಕನ ಚಿಕಿತ್ಸಾ ವೆಚ್ಚ ಭರಿಸುವವರೆಗೆ ನಿರಂತರ ಸುದ್ದಿ ಮಾಡಲಿದೆ.
Author: Karnataka Files
Post Views: 466





