Download Our App

Follow us

Home » ಕಾನೂನು » ಧಾರವಾಡ : ಪ್ರತಿಭಟನೆಯಲ್ಲಿ ಶಾಸಕ ಬೆಲ್ಲದರಿಗೆ ಅವಮಾನ / ಶಾಲು ತೆಗೆದು ಮಾತಾಡುವಂತೆ ಕಿರಚಾಟ

ಧಾರವಾಡ : ಪ್ರತಿಭಟನೆಯಲ್ಲಿ ಶಾಸಕ ಬೆಲ್ಲದರಿಗೆ ಅವಮಾನ / ಶಾಲು ತೆಗೆದು ಮಾತಾಡುವಂತೆ ಕಿರಚಾಟ

ನೇಮಕಾತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳು ಇಂದು ಧಾರವಾಡದಲ್ಲಿ ನಡೆದ ಹೋರಾಟ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯ್ತು.

ಕಾಂತಕುಮಾರ ನೇತೃತ್ವದ ಅಕ್ಷಾ ಸಂಘಟನೆ ಇಂದು ಪ್ರತಿಭಟನೆಗೆ ಕರೆ ಕೊಟ್ಟಿತ್ತು. ಆದರೆ ಪೊಲೀಸ್ ಇಲಾಖೆ ಪ್ರತಿಭಟನೆ ನಡೆಸಲು ಈ ಸಂಘಟನೆಗೆ ಅನುಮತಿ ನಿರಾಕರಿಸಿತ್ತು.

ಬಿಜೆಪಿ ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಇಂದು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾಂತಕುಮಾರ ಅಬ್ಬರದ ಭಾಷಣ ಮಾಡಿದ್ದರು.

ಜುಬಿಲಿ ಸರ್ಕಲ್ ನಲ್ಲಿ ಅನುಮತಿ ನಿರಾಕರಿಸಿದ್ದರು, ಅಲ್ಲಿಗೆ ಬಂದ ಸಂಘಟನೆಯ ವಿದ್ಯಾರ್ಥಿಗಳು ನಾಲ್ಕು ತಾಸಿಗೂ ಹೆಚ್ಚು ಕಾಲ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. 

ಈ ವೇಳೆ ಅಲ್ಲಿಗೆ ಬಂದ ಶಾಸಕ ಅರವಿಂದ ಬೆಲ್ಲದ, ಕಾಂತಕುಮಾರ ಪಕ್ಕದಲ್ಲಿ ನಿಂತು ಭಾಷಣ ಆರಂಭ ಮಾಡಿದರು. ಶಾಸಕ ಬೆಲ್ಲದ ಮಾತು ಆರಂಭಿಸುತ್ತಿದ್ದಂತೆ ಗದ್ದಲ, ಕಿರುಚಾಟ ನಡೆಸಿದ ವಿದ್ಯಾರ್ಥಿಗಳು ಬೆಲ್ಲದರ ಮಾತಿಗೆ ಅಡ್ಡಿಪಡಿಸಿದರು.

ಶಾಸಕ ಬೆಲ್ಲದ ಅವರು ಧರಿಸಿದ್ದ ಕೇಸರಿ ಶಾಲು ತೆಗೆದು ಮಾತನಾಡುವಂತೆ ಗದ್ದಲ ಪ್ರಾರಂಭಿಸಿದರು. ಕಾಂತಕುಮಾರ ನೇತೃತ್ವದಲ್ಲಿ ಬಂದವರು ಶಾಸಕ ಅರವಿಂದ ಬೆಲ್ಲದರಿಗೆ ಅವಮಾನಿಸಿದ ಘಟನೆ ನಡೆಯಿತು.

ಕಾಂತಕುಮಾರ ನಮ್ಮ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಿದೆ ಎಂದು ಅಲ್ಲಿದ್ದವರಿಗೆ ತಿಳಿಹೇಳಬೇಕಿತ್ತು. ಆದರೆ ಕಾಂತಕುಮಾರ ಅದಾವದನ್ನು ಮಾಡದೆ ಇದ್ದಾಗ ಬೆಲ್ಲದ ಅವರು ತಮ್ಮ ಭಾಷಣ ನಿಲ್ಲಿಸಬೇಕಾಯಿತು.

ಇದರಿಂದಾಗಿ ಬೆಲ್ಲದ ಅವರಿಗೆ ತಮ್ಮ ತವರಿನಲ್ಲಿಯೇ ಅವಮಾನಿಸಿದ್ದು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಯ್ತು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!