ಪವಿತ್ರ ರಮಜಾನ್ ಹಬ್ಬ ಆರಂಭಗೊಂಡಿದೆ. ಮುಸ್ಲಿಮ್ ಸಮಾಜದವರು ಒಂದು ತಿಂಗಳ ಉಪವಾಸ ( ರೋಜಾ ) ಮಾಡುತ್ತಾರೆ.

ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ವಿನೋದ ಅಸೂಟಿಯವರು ಇಂದು ಸ್ವತಃಹ ಉಪವಾಸವಿದ್ದು, ನವಲಗುಂದದಲ್ಲಿ ಇಫ್ತಾರ್ ಕೂಟ ನಡೆಸಿದರು.

ನವಲಗುಂದದ 10 ಮಸೀದಿಗಳಲ್ಲಿ ಏಕಕಾಲಕ್ಕೆ ಇಫ್ತಾರ ಕೂಟ ನಡೆಸಿದ ಸರ್ವಧರ್ಮ ವೇದಿಕೆ ಹಾಗೂ ವಿನೋದ ಅಸೂಟಿ ಗೆಳೆಯರ ಬಳಗ ಭಾವೈಕ್ಯತೆ ಬೆಸೆದು ಮಾದರಿಯಾದರು.
ಇದೇ ವೇಳೆ ಉಪವಾಸವಿದ್ದ ವಿನೋದ ಅಸೂಟಿಯವರು ನವಲಗುಂದದ ಬಿಲಾಲ್ ಮಸೀದಿಯಲ್ಲಿ ನಮಾಜ್ ಮಾಡಿ, ಜನರೊಂದಿಗೆ ಊಟ ಮಾಡಿದರು.

ಈ ಸಂದರ್ಭದಲ್ಲಿ ಮಸೀದಿಗಳ ಪೇಶ ಇಮಾಮ್ ( ಮೌಲಾನಾ ) ಹಾಗೂ ಮೌಜಿನ್ ಗಳಿಗೆ ಬಟ್ಟೆ ನೀಡಿ ಗೌರವ ಸಮರ್ಪಿಸಿದರು.

Author: Karnataka Files
Post Views: 548





