Download Our App

Follow us

Home » ಕಾನೂನು » ಧಾರವಾಡ : ಉಪನಗರ ಪೊಲೀಸ್ ಠಾಣೆಯಲ್ಲಿ FIR ಡೀಲ್ / ನಿಂಬೆಯ ಚಮತ್ಕಾರ

ಧಾರವಾಡ : ಉಪನಗರ ಪೊಲೀಸ್ ಠಾಣೆಯಲ್ಲಿ FIR ಡೀಲ್ / ನಿಂಬೆಯ ಚಮತ್ಕಾರ

ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಅಂದಾದುಂದಿ ದರ್ಬಾರ್ ನಡೆದಿದೆ. ನೊಂದವರು ಪೊಲೀಸ್ ಠಾಣೆ ಕಟ್ಟೆ ಹತ್ತಿದರೆ ಅವರನ್ನೇ ಸುಲಿಯುವ ಕೆಲಸ ಉಪನಗರ ಪೊಲೀಸ್ ಠಾಣೆಯಲ್ಲಿ ನಡೆಯುತ್ತಿದೆ.

ಈ ಪೊಲೀಸ್ ಠಾಣೆಯಲ್ಲಿ FIR ಧಾಖಲಾದರೆ ಸಾಕು ಡೀಲ್ ಆರಂಭವಾಗುತ್ತದೆ. ಅನ್ಯಾಯಕ್ಕೆ ಒಳಗಾದವರು ನ್ಯಾಯ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ಬಂದು FIR ಧಾಖಲು ಮಾಡುತ್ತಾರೆ. 

ಹಾಗೇ FIR ಮಾಡಿದ ಬೆನ್ನಲ್ಲೇ ಆರೋಪಿತರ ಜೊತೆ ಕೂಡಿ, ಕೇಸಿನಿಂದ ಬಚಾವ್ ಆಗಬೇಕು ಎಂದರೆ ಇಂತಿಷ್ಟು ಹಣ ಕೊಡಬೇಕು ಎಂದು ಅಲ್ಲಿಯ ಕೇಸ್ ವರ್ಕರನೊಬ್ಬ ಡೀಲ್ ಮಾಡಿರುವ ಸುದ್ದಿ ಧಾಖಲೆ ಸಮೇತ ಕರ್ನಾಟಕ ಫೈಲ್ಸ್ ಗೆ ಸಿಕ್ಕಿದೆ.

ಅಕ್ಟೋಬರ್ 23, 2025 ರಂದು ಸರ್ವೆ ನಂಬರ್ 6/2 ಜಮೀನಿಗೆ ಸಂಬಂಧಿಸಿದಂತೆ ನಿಂಬೆಯ ಚಮತ್ಕಾರ ನಡೆದಿದೆ. ಕೇಸು ಉಲ್ಟಾ ಹೊಡೆಸಲು 4 ಲಕ್ಷ ಪಿಕಿರುವ ಸಂಗತಿ ಬಯಲಾಗಿದೆ.

ಉಪನಗರ ಪೊಲೀಸ್ ಠಾಣೆಯನ್ನು ಡೀಲ್ ಮಾಡುವ ಕೇಂದ್ರವನ್ನಾಗಿ ಮಾಡಿಕೊಂಡಿರುವ ASI ನೊಬ್ಬ  ಅಲ್ಲಿಯ ಸಿಬ್ಬಂದಿಗೂ ಸಾಕು ಸಾಕಾಗಿದ್ದಾನೆ.

ಆತ ನಡೆಸಿದ ಬ್ರಷ್ಟಾಚಾರವನ್ನು, ಅಲ್ಲಿನವರು ಸೇರಿದಂತೆ ದೂರು ಕೊಟ್ಟವರು ಎಳೆ ಎಳೆಯಾಗಿ ಹೊರ ಹಾಕುತಿದ್ದು, ದಕ್ಷ ಪೊಲೀಸ್ ಕಮಿಷನರ್ ಹೆಸರಿಗೆ ಕಳಂಕ ತರುವ ಕೆಲಸದಲ್ಲಿ ತೊಡಗಿದ್ದಾರೆ.

ಆ ಅಸಾಮಾನ್ಯ,  ಅಸಾಮಾಮಿಯ ಹಾಗೂ ಪೊಲೀಸ್ ಇಲಾಖೆಗೆ ಕಳಂಕ ತರುತ್ತಿರುವ ಆಕಳ ಮಾರಿಯ ASI ಕುರಿತ ಮತ್ತಷ್ಟು ಧಾಖಲೆಗಳನ್ನು ಕರ್ನಾಟಕ ಫೈಲ್ಸ್ ಹೊರಹಾಕಲಿದೆ.

 

Karnataka Files
Author: Karnataka Files

Leave a Comment

RELATED LATEST NEWS

Top Headlines

ವಾಣಿಜ್ಯ ಅಡುಗೆ ಅನಿಲದ ಕೊರತೆ : ಬೆಂಗಳೂರಿನ ಹೋಟೆಲ್ ಗಳು ನಾಳೆಯಿಂದ ಬಂದ್

ವಾಣಿಜ್ಯ ಅಡುಗೆ ಅನಿಲದ ಕೊರತೆಯಿಂದಾಗಿ ನಾಳೆಯಿಂದ ತಮ್ಮ ರೆಸ್ಟೋರೆಂಟ್‌ಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಬೆಂಗಳೂರು ಹೋಟೆಲ್‌ಗಳ ಸಂಘ ತಿಳಿಸಿದೆ.  ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಅನಿಲ ಪೂರೈಕೆ

Live Cricket

error: Content is protected !!