Download Our App

Follow us

Home » ಕರ್ನಾಟಕ » ಧಾರವಾಡ : ಸಾವಿರಾರು ವಿದ್ಯಾರ್ಥಿಗಳ ನೆಚ್ಚಿನ ಪ್ರೊಫೆಸರ್ ಉಷಾ ಮೂರ್ತಿ ಇನ್ನಿಲ್ಲ

ಧಾರವಾಡ : ಸಾವಿರಾರು ವಿದ್ಯಾರ್ಥಿಗಳ ನೆಚ್ಚಿನ ಪ್ರೊಫೆಸರ್ ಉಷಾ ಮೂರ್ತಿ ಇನ್ನಿಲ್ಲ

ಧಾರವಾಡದ ಕರ್ನಾಟಕ ಕಾಲೇಜಿನ ಪ್ರಾಂಶುಪಾಲರಾಗಿ, ಸಾವಿರಾರು ವಿದ್ಯಾರ್ಥಿಗಳ ನೆಚ್ಚಿನ ಪ್ರೊಫೆಸರ್ ಆಗಿದ್ದ ಉಷಾ ಮೂರ್ತಿಯವರು ಇಂದು ನಿಧನರಾಗಿದ್ದಾರೆ.

1994 ರ ಅವಧಿಯಲ್ಲಿ ಅವರು ಕರ್ನಾಟಕ ಕಾಲೇಜಿನ ಪ್ರಾಂಶುಪಾಲರಾಗಿದ್ದರು.

ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.

ತಮ್ಮ ಕೊನೆಯುಸಿರು ಇರುವವರೆಗೂ ಉಷಾ ಮೂರ್ತಿಯವರು, ಯೂನಿವರ್ಶಿಟಿ ಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ರಾಜಕೀಯ ಶಾಸ್ತ್ರ ಭೋಧನೆ ಮಾಡುತ್ತಿದ್ದರು.

ಧಾರವಾಡದ ಸಪ್ತಾಪುರ 1 ನೇ ಕ್ರಾಸನಲ್ಲಿರುವ ಅವರ ಮನೆಯಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಂದು ರಾತ್ರಿ 8 ಘಂಟೆಯವರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರ ಶಿಷ್ಯವರ್ಗ ತಿಳಿಸಿದೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ರಾಜೀನಾಮೆ ಸಂಪುಟದಲ್ಲಿ ಮಹಿಳಾ ಸಚಿವರಿಗೆ ಸ್ಥಾನವಿಲ್ಲದ್ದಕ್ಕೆ ಅಸಮಾಧಾನ?

ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಳೆದ ಎರಡು ವರ್ಷಗಳಿಂದ ರಾಜ್ಯ

Live Cricket

error: Content is protected !!