ತಾಜಾ ತರಕಾರಿಗೆ ಹೆಸರಾದ ಧಾರವಾಡದ ಎಪಿಎಂಸಿ ಯಲ್ಲಿಂದು ಬಹುತೇಕ ತರಕಾರಿಗಳ ಬೆಲೆ ಕುಸಿತ ಕಂಡಿತ್ತು.
ಮೆಂತೆ ಪಲ್ಲೆ ಯನ್ನು ಮಾರುಕಟ್ಟೆಗೆ ತಂದಿದ್ದ ರೈತರು ಬೆಲೆ ಸಿಗದೇ ಇರೋ ಕಾರಣಕ್ಕೆ ತಂದ ಬೆಳೆಯನ್ನು ರಸ್ತೆಯಲ್ಲಿಯೇ ಬಿಟ್ಟು ಹೋಗಿದ್ದಾರೆ.
ಇವತ್ತಿನ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಇಂತಿದೆ.
ಟಮೇಟೋ 4 ರೂಪಾಯಿಗೆ ಕೆಜಿ
ಈರುಳ್ಳಿ 15 ರೂಪಾಯಿಗೆ ಕೆಜಿ
ಚವಳಿಕಾಯಿ 40 ರೂಪಾಯಿಗೆ ಕೆಜಿ
ಬದ್ನಿಕಾಯಿ 15 ರೂಪಾಯಿಗೆ ಕೆಜಿ
ಬೆಂಡಿಕಾಯಿ 10 ರೂಪಾಯಿಗೆ ಕೆಜಿ
ಹಸಿಮೆಣಸಿನಕಾಯಿ 40 ರೂಪಾಯಿಗೆ ಕೆಜಿ
ಆಲೂಗಡ್ಡೆ 15 ರೂಪಾಯಿಗೆ ಕೆಜಿ
ಕ್ಯಾಬೀಜ 10 ರೂಪಾಯಿಗೆ ಒಂದು
ಕೊತಂಬ್ರಿ 10 ರೂಪಾಯಿಗೆ 4
ಪುದಿನಾ 10 ರೂಪಾಯಿಗೆ 2
ಸಬ್ಬಸಗಿ 2 ರೂಪಾಯಿಗೆ ಒಂದು
ಹೀಗೆ ಬಹುತೇಕ ತರಕಾರಿ ಬೆಲೆ ಇಂದು ಕುಸಿತ ಕಂಡಿತ್ತು.
Author: Karnataka Files
Post Views: 111




