ಧಾರವಾಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಹೆಡ್ ಕಾನ್ಸ್ಟೇಬಲ್ ಅಬ್ದುಲ್ ಕಾಕರ, ಇಲಾಖೆಯ ಮಾನ ಹೆಚ್ಚಿಸುತ್ತ ಬಂದಿದ್ದಾರೆ.
ಸಧ್ಯ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಬ್ದುಲ್ ಕಾಕರ ಅವರಿಗೆ ಐ ಜಿ ಪಿ ಪ್ರಶಂಸನೀಯ ಪತ್ರ ನೀಡಿ ಗೌರವಿಸಿದ್ದಾರೆ.
ಜಿಲ್ಲೆಯಲ್ಲಿ ನಡೆಯುವ ಕ್ರೈಮ್ ಗಳನ್ನು ಭೇಧಿಸುವ ವಿಶೇಷ ತಂಡದಲ್ಲಿ ಕಾಕರ ಇರಲೇಬೇಕು. ಕೊಟ್ಟ ಕೆಲಸವನ್ನು ಮಾಡಿ ಮುಗಿಸುವ ಇವರು ಇಲಾಖೆಗೆ ಸವಾಲಾದ ಕ್ರೈಮ್ ಗಳನ್ನು ಪತ್ತೆ ಹಚ್ಚಿ ಇಲಾಖೆ ಮರ್ಯಾದೆಯನ್ನು ಹೆಚ್ಚಿಸಿದ್ದಾರೆ.
ಪ್ರಮುಖವಾಗಿ ಕೇಸ್ ನಂಬರ 30/2026 ಹಾಗೂ 52/2026 ರ ರಾಬರಿ ಕೇಸ್ ಪತ್ತೆ ಮಾಡುವಲ್ಲಿ ಅತ್ಯುತ್ತಮ ಕಾರ್ಯನಿರ್ವಸಿದ್ದಕ್ಕೆ ಪ್ರಶಂಸನಾ ಪತ್ರ ಲಭಿಸಿದೆ. ಇವರ ಜೊತೆಗೆ ASI ಎಮ್ ಎನ್ ಹೊನ್ನಪ್ಪನವರ ಇವರಿಗೂ ಪ್ರಶಂಸನಾ ಪತ್ರ ಕೊಟ್ಟು ಅಭಿನಂಧಿಸಲಾಗಿದೆ.
Author: Karnataka Files
Post Views: 466




