ವಿನಯ ಕುಲಕರ್ಣಿಯವರಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟನ ವಿಭಾಗೀಯ ಪೀಠದ ಆದೇಶ ಹೊರ ಬೀಳುತ್ತಿದಂತೆ ಲಿಂಗಾಯತ ಸಮುದಾಯದಲ್ಲಿ ಗಂಭೀರ ಚರ್ಚೆಯೊಂದು ಆರಂಭವಾಗಿದೆ.
ಲಿಂಗಾಯತರು, ನಮ್ಮ ವೈರಿಗಳು ಯಾರು ಅನೋದನ್ನ ತಿಳಿದುಕೊಳ್ಳದೆ ಇದ್ದರೆ ನಮಗೆ ಉಳಿಗಾಲವಿಲ್ಲ
ಇಂತಹದೊಂದು ಚರ್ಚೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹಚ್ಚಿದೆ. ಪಕ್ಷಾತೀತವಾಗಿ ಲಿಂಗಾಯತ ರಾಜಕೀಯ ನಾಯಕರ ಆಸ್ತಿತ್ವದ ಬಗ್ಗೆ, ಸಮುದಾಯದ ಜನರು ಎಚ್ಚರದ ಮಾತುಗಳನ್ನು ಆಡುತ್ತಿದ್ದಾರೆ.
ಜೆ ಬಿ ಪಾಟೀಲರು ಬರೆದುಕೊಂಡಿದ್ದು
ವಿನಯ ಕುಲಕರ್ಣಿಯವರಿಗೆ ಜಾಮೀನು ದೊರೆತಿರುವ ಸಂಗತಿ ಕೇಳಿ ತುಂಬಾ ಸಂತೋಷವಾಯಿತು. ಕಾರಣ, ಅವರೊಬ್ಬ “ನಿರಪರಾಧಿ”.
ಈ ಮಾತನ್ನು ನಾನು ಹೇಳುತ್ತಿಲ್ಲ. ತಿಂಗಳ ಹಿಂದೆ ನಾನು ಕರ್ನಾಟಕದ ಉಚ್ಚ ನ್ಯಾಯಾಲಯದ ಶ್ರೇಷ್ಠ ವಕೀಲರೊಬ್ಬರನ್ನು ಭೇಟಿಯಾಗಿದ್ದೆ.
ಲೌಕಿಕವಾಗಿ ಮಾತಾಡುವಾಗ ವಿನಯ ಕುಲಕರ್ಣಿ ಅವರ ಹೆಸರು ಪ್ರಸ್ತಾಪವಾಯಿತು. ಆಗ ಅವರು, “ವಿನಯ ಕುಲಕರ್ಣಿ ನಿರಪರಾಧಿ” ಎಂದು ಬಿಟ್ಟರು! ನನಗೆ ಅಚ್ಚರಿಯಾಯಿತು. “ಹಾಗಿದ್ದರೆ ಸೆಷನ್ಸ್ ಕೋರ್ಟ್ನಲ್ಲಿ ಶಿಕ್ಷೆ ಹೇಗಾಯಿತು?” ಎಂದು ಪ್ರಶ್ನಿಸಿದೆ.
ಆಗ ಅವರು, “ಕೇಸಿನಲ್ಲಿ ಏನೂ ಇಲ್ಲ. ಅವರನ್ನು ಸುಮ್ಮನೇ ಸಿಲುಕಿಸಲಾಗಿದೆ (Frame ಮಾಡಲಾಗಿದೆ), ಇದರ ಹಿಂದೆ ಅತ್ಯಂತ ವ್ಯವಸ್ಥಿತವಾಗಿ ಮತ್ತು ತೆರೆಮರೆಯಲ್ಲಿ ಕೆಲಸವಾಗುತ್ತಿದೆ” ಎಂದು ಕಟು ಸತ್ಯವನ್ನು ಬಿಚ್ಚಿಟ್ಟರು.
ನಾನು ಗರಬಡಿದವನಂತೆ ಕುಳಿತುಬಿಟ್ಟೆ. ನ್ಯಾಯದೇವತೆಯ ಕಪ್ಪು ಬಟ್ಟೆಯ ಹಿಂದಿರುವ ಕಪ್ಪು ಕತೆಯನ್ನು ಅವರು ಹೇಳುತ್ತಾ ಹೋದರು. ನಾನು ಮೂಕ ಪ್ರೇಕ್ಷಕನಾಗಿ ಕೇಳುತ್ತಾ ಹೋದೆ.
“ನಾವೀಗ ಏನು ಮಾಡಬಹುದು?” ಎಂದು ಕೇಳಿದ್ದಕ್ಕೆ, “ಅದು ನಿಮ್ಮ ಕೆಲಸ” ಎನ್ನುತ್ತಾ ಎದ್ದು ನಿಂತರು. “ಇದು ಕೇವಲ ನನ್ನೊಬ್ಬನ ಭಾವನೆಯಲ್ಲ, ಇದು ಹೈಕೋರ್ಟ್ನ ಎಲ್ಲ ಪ್ರತಿಭಾವಂತ ವಕೀಲರೆಲ್ಲರ ಭಾವನೆ” ಎನ್ನುತ್ತಾ ಕೈ ಕುಲಕಿದರು.
ಅವರ ಮಾತುಗಳು ಪ್ರಾಮಾಣಿಕವಾಗಿದ್ದವು. ಅವರ ಮಾತಿನಲ್ಲಿ ನನಗೂ ವಿಶ್ವಾಸವಿತ್ತು. ಭಾರವಾದ ಹೃದಯದಿಂದ ಅಲ್ಲಿಂದ ಹೊರಬಂದವನೇ, ಅವರಿಗೆ ಹತ್ತಿರವೆಂದು ನಾನು ತಿಳಿದುಕೊಂಡಿದ್ದವರಿಗೆ ಕರೆ ಮಾಡಿದೆ. “ವಿಷಯ ಗಂಭೀರವಾಗಿದೆ. ಅವರ ಮನೆಯವರ ಹತ್ತಿರ ಮಾತಾಡೋಣ, ನಡೆಯಿರಿ” ಎಂದೆ. ಅವರು ಮೀನಮೇಷ ಎಣಿಸತೊಡಗಿದರು.
”ಅರ್ಧ ಗಂಟೆ ಸಮಯ ಕೊಡಿ, ನಾನು ಮರಳಿ ಕರೆ ಮಾಡುತ್ತೇನೆ” ಎಂದು ಫೋನ್ ಕಟ್ ಮಾಡಿದರು. ಮತ್ತೊಮ್ಮೆ ಅವರ ಕರೆ ಬಂದಾಗ, “ಕೆಲವು ನಂಬಲಾಗದ ವಿಷಯಗಳನ್ನು ಹೇಳಿ ಈ ವಿಷಯದಲ್ಲಿ ಮುಂದುವರಿಯುವುದು ಸಮಂಜಸವಲ್ಲ, ಬಿಟ್ಟುಬಿಡಿ” ಎಂಬ ಉಚಿತ ಸಲಹೆ ನೀಡಿದರು. ವಿಧಿ ಇಲ್ಲದೆ ಕೈ ಕೈ ಹಿಸಿಕಿಕೊಂಡು ಮರುಗಿದೆ.
ನಮ್ಮಂಥ ನರಮಾನವರು ಕೈಬಿಟ್ಟರೂ ದೇವರು ಕೈಬಿಡಲಿಲ್ಲ; ನ್ಯಾಯದೇವತೆ ಕೈಬಿಡಲಿಲ್ಲ. ಕಟು ಸತ್ಯ ಹೊರಬಂದಿದೆ ಅಷ್ಟೇ. ಸತ್ಯಕ್ಕೆಸಾವಿಲ್ಲ, ಸುಳ್ಳಿಗೆ ಸಾವಾಗಿದೆ.
ಲಿಂಗಾಯತ ಸಮಾಜದ ಅನೇಕರು, ರಾಜ್ಯದಲ್ಲಿ ಹೇಗೆ ಲಿಂಗಾಯತ ನಾಯಕರನ್ನು ನಡೆಸಿಕೊಳ್ಳಲಾಗುತ್ತಿದೆ. ಯಾವೆಲ್ಲ ಷಡ್ಯಂತ್ರ ಹೆಣೆಯಲಾಗುತ್ತಿದೆ ಎಂಬುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿದ್ದಾರೆ.





