ಧಾರವಾಡದ ನೆಲದಲ್ಲಿ ನಿಂತು ಎಲ್ಲೆಂದರಲ್ಲಿ ಕಲ್ಲು ಒಗೆದರೆ, ಆ ಕಲ್ಲು ಒಬ್ಬ ಸಾಹಿತಿ ಅಥವಾ ಸಂಗೀತಗಾರನ ಮನೆಯ ಮೇಲೆ ಬೀಳುತ್ತದೆ ಅನ್ನೋ ಮಾತು ಒಂದು ಕಾಲಕ್ಕೆ ಜನಪ್ರಿಯಗೊಂಡಿತ್ತು.
ಆದ್ರೆ ಇದೀಗ ಧಾರವಾಡ ಬದಲಾಗಿದೆ. ಹಣದ ವ್ಯಾಮೋಹ, ಧಾರವಾಡ ನಗರವನ್ನು ಮಲಿನಗೊಳಿಸಿದೆ. ಅನಾಗರಿಕ, ಆಕ್ರಮ ಚಟುವಟಿಕೆ ತಡೆಗಟ್ಟಬೇಕಾದ ಶಹರ ಠಾಣೆಯ ಕೆಲವು ಪೊಲೀಸರು ಡೀಲ್ ನಲ್ಲಿ ಮುಳುಗಿದ್ದು, ಧಾರವಾಡ ಹಾದಿ ತಪ್ಪುತ್ತಿದೆ.
ಸಾಹಿತಿಗಳು, ಸಂಗೀತಗಾರರರು, ಸುಸಂಸ್ಕೃತರು ಧಾರವಾಡದ ಹೆಸರನ್ನು ವಿಶ್ವದಲ್ಲಿ ಬೆಳಗಿದ್ದಾರೆ. ಆದರೆ ಧಾರವಾಡ ಇದೀಗ ದೋ ನಂಬರ ದಂಧೆಗೆ ಹೇಳಿ ಮಾಡಿಸಿದ ನಗರ ಎಂಬ ಹೆಗ್ಗಳಿಕೆಗೆ ಹೆಸರಾಗಿದೆ. ಅದರಲ್ಲೂ ಧಾರವಾಡ ಶಹರ ಠಾಣೆ ವ್ಯಾಪ್ತಿ ಅವರ ಪಾಲಿಗೆ ಬಹಳ ಸುರಕ್ಷಿತ ತಾಣವಾಗಿದೆ.
ಧಾರವಾಡ ಶಹರ ಠಾಣೆ ವ್ಯಾಪ್ತಿಯ ಕೆಲವು ಲಾಡ್ಜ್ ಗಳಲ್ಲಿ ಚರ್ಮ ದಂಧೆ ಜೋರಾಗಿದೆ. ಯೌವನ, ಹಾದಿ ತಪ್ಪುತ್ತಿದೆ. ಪೊಲೀಸರಿಗೂ ಈ ವಿಷಯ ಗೊತ್ತಿಲ್ಲ ಅಂತಿಲ್ಲ. ಅವರಿಗೆ ಎಲ್ಲವೂ ಗೊತ್ತಿದೆ.
ಧಾರವಾಡ ಶಹರ ಠಾಣೆ ಜನರ ನಂಬಿಕೆ ಕಳೆದುಕೊಳ್ಳುತ್ತಿದ್ದು, ಮೀಟರ್ ಬಡ್ಡಿ ವ್ಯವಹಾರ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ಧಾರವಾಡದ ಮಾನ ಮರ್ಯಾದೆ ಕಾಪಾಡಬೇಕಾದರೆ, ಹಿರಿಯ ಪೊಲೀಸ್ ಅಧಿಕಾರಿಗಳು, ಗೃಹ ಸಚಿವರ ಗಮನಕ್ಕೆ ಬರುವ ಮುನ್ನ ಕೆಲ ಬದಲಾವಣೆ ಮಾಡಬೇಕಿದೆ.





