ಭಾರತೀಯ ರೈಲ್ವೆ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ ರೈಲಿನಲ್ಲಿ ಪ್ರಯಾಣಿಕರಿಗೆ ನೀಡಲಾಗುವ ಬೆಡಸಿಟ್, ಕಂಬಳಿ, ದಿಂಬುಗಳನ್ನು ಸಂರಕ್ಷಣೆ ಮಾಡುವದು ದೊಡ್ಡ ತಲೆನೋವಾಗಿದೆ.
2022 ರಿಂದ ಇಲ್ಲಿಯವರೆಗೆ ರೈಲಿನಲ್ಲಿ 104 ಕೋಟಿ ಮೌಲ್ಯದ ಬಟ್ಟೆ ಸಾಮಾಗ್ರಿಗಳನ್ನು ಪ್ರಯಾಣಿಕರು ಕಳವು ಮಾಡಿದ್ದಾರೆ.

ಈ ಮೂವರು ಯುವಕರು ಮೈಮೇಲೆ ಹೊದ್ದುಕೊಂಡಿರುವ ಬಿಳಿ ಲಿನಿನ್ ಮೇಲೆ “ಪಶ್ಚಿಮ ರೈಲ್ವೆ” ಎಂದು ಸ್ಪಷ್ಟವಾಗಿ ಗುರುತಿಸಲಾಗಿದೆ. ಈ ಬೆಡ್‌ಶೀಟ್‌ಗಳನ್ನು ಪಶ್ಚಿಮ ರೈಲ್ವೆ ರೈಲಿನಿಂದ ಕಳವು ಮಾಡಲಾಗಿದೆ ಎನ್ನಲಾಗಿದೆ.
ಜನವರಿ 2022 ರಿಂದ ಮೇ 2026 ರವರೆಗೆ ರೈಲ್ವೆ ವಿಭಾಗಗಳಲ್ಲಿ ಸಂಗ್ರಹಿಸಲಾದ ಆರ್‌ಟಿಐ ಮಾಹಿತಿಯ ಪ್ರಕಾರ, 1.27 ಕೋಟಿಗೂ ಹೆಚ್ಚು ಬೆಡ್‌ರೋಲ್ ವಸ್ತುಗಳು ಕಳವು ಆಗಿದ್ದು, ಒಟ್ಟು ₹104.51 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ವರದಿಯಾಗಿದೆ.
ಈ ಪೈಕಿ, ಫೇಸ್ ಟವೆಲ್‌ಗಳು: 46.54 ಲಕ್ಷ
ಬೆಡ್‌ಶೀಟ್‌ಗಳು: 41.13 ಲಕ್ಷ
ದಿಂಬಿನ ಕವರ್‌ಗಳು: 23.59 ಲಕ್ಷ
ಕಂಬಳಿಗಳು: 12.95 ಲಕ್ಷ
ದಿಂಬುಗಳು: 2.76 ಲಕ್ಷ ಹೀಗೆ
₹104 ಕೋಟಿಗೂ ಹೆಚ್ಚು ರೈಲ್ವೆ ಆಸ್ತಿ ಕಳುವಾಗಿದೆ.





