ಬಿಜೆಪಿಯಲ್ಲಿರುವ ಲಿಂಗಾಯತ ಮುಖಂಡರ ಅಸಮಾಧಾನ ಮತ್ತೆ ಸ್ಫೋಟಗೊಂಡಿದೆ. ಲಿಂಗಾಯತ ನಾಯಕರನ್ನು ಮಟ್ಟ ಹಾಕುವ ಯತ್ನ ಬಿಜೆಪಿಯಲ್ಲಿ ಮುಂದುವರೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯನಾಗಿರುವ ನನಗೆ ಪಕ್ಷದ ನಾಯಕರು ಕಡೆಗಣಿಸುತ್ತಿದ್ದಾರೆ. ಪಕ್ಷದ ಸಭೆಗೆ ನನಗೆ ಆಮಂತ್ರಣ ಕೊಡುತ್ತಿಲ್ಲ. ಇದೆಲ್ಲವನ್ನು ಪಕ್ಷದ ದೆಹಲಿ ನಾಯಕರಿಗೆ ಹೇಳುತ್ತೇನೆ ಎಂದು ಪ್ರದೀಪ ಶೆಟ್ಟರ ತಿಳಿಸಿದ್ದಾರೆ.
ಲಿಂಗಾಯತ ನಾಯಕರು ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ಬಿಜೆಪಿಯಲ್ಲಿನ ಮುಖಂಡರು ಒಬ್ಬೊಬ್ಬರಾಗಿ ಹೊರಗೆ ಬರುವ ಲಕ್ಷಣಗಳು ಕಂಡು ಬರುತ್ತಿವೆ. ಇದೇ ರೀತಿ ಲಿಂಗಾಯತರನ್ನು ಕಡೆಗಣಿಸಿದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೊಡೆತ ಬೀಳುವದು ಗ್ಯಾರೆಂಟಿ ಎಂದು ಪ್ರದೀಪ ಎಚ್ಚರಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಯಾಗಿರುವ ಜಗದೀಶ ಶೆಟ್ಟರ ಅವರ ಸಹೋದರರಾಗಿರುವ ಪ್ರದೀಪ ಶೆಟ್ಟರ ಬಿಜೆಪಿ ನಾಯಕರ ವಿರುದ್ಧ ಇದೀಗ ಸಮರ ಸಾರಿದ್ದಾರೆ.
Author: Karnataka Files
Post Views: 4





