Download Our App

Follow us

Home » ಕಾನೂನು » ನೆತ್ತರು ಕಂಡ ಹುಬ್ಬಳ್ಳಿ. ಕೊಲೆಯಲ್ಲಿ ಅಂತ್ಯವಾದ ಕ್ಷುಲ್ಲಕ ಜಗಳ.

ನೆತ್ತರು ಕಂಡ ಹುಬ್ಬಳ್ಳಿ. ಕೊಲೆಯಲ್ಲಿ ಅಂತ್ಯವಾದ ಕ್ಷುಲ್ಲಕ ಜಗಳ.

ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತರು ಹರಿದಿದೆ.

ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಹುಬ್ಬಳ್ಳಿಯ ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸ್ಮಾರ್ಟ್ ವಾಚ್ ಗಾಗಿ ಮಂಜುನಾಥ ಹಾಗೂ ಅಸ್ಲಮ್ ನಡುವೆ ಸಣ್ಣ ಜಗಳ ಇತ್ತು ಎನ್ನಲಾಗಿದೆ. ಇಂದು ರಾತ್ರಿ 8-30 ರ ಸುಮಾರಿಗೆ ಮಂಜುನಾಥ, ಅಸ್ಲಮ್ ಬಳಿ ಬಂದಾಗ ಇಬ್ಬರ ನಡುವೆ ವಾಕ್ಸಮರ ನಡೆದಿದೆ. ಇ ವೇಳೆ ಪಕ್ಕದಲ್ಲಿದ್ದ ಚಾಕುವಿನಿಂದ ಮಂಜುನಾಥ, ಅಸ್ಲಮ್ ನ ಹೊಟ್ಟೆಗೆ ಇರಿದಿದ್ದಾನೆ. ತಕ್ಷಣ ಅಸ್ಲಮ್ ನನ್ನು ಕಿಮ್ಸ್ ಆಸ್ಪತ್ರೆಗೆ ತರುವಷ್ಟರಲ್ಲಿ ಅಸ್ಲಮ್ ಮೃತಪಟ್ಟಿದ್ದಾನೆ. ಕೊಲೆ ಮಾಡಿರುವ ಮಂಜುನಾಥನನ್ನು ಬಂಧಿಸಲು ಕೇಶ್ವಾಪುರ ಪೊಲೀಸರು ತಂಡ ರಚಿಸಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಧಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!