Download Our App

Follow us

Home » ರಾಜಕೀಯ » ಮಹಾದಾಯಿ ವಿಚಾರ, ಕೇಂದ್ರ ಕ್ಲಿಯರೆನ್ಸ್ ಕೊಟ್ಟಿಲ್ಲ ಅಂದ್ರು ಸಿದ್ದರಾಮಯ್ಯ. ರೈತರ ದಾರಿ ತಪ್ಪಿಸಿದ್ರಾ ಜೋಶಿ

ಮಹಾದಾಯಿ ವಿಚಾರ, ಕೇಂದ್ರ ಕ್ಲಿಯರೆನ್ಸ್ ಕೊಟ್ಟಿಲ್ಲ ಅಂದ್ರು ಸಿದ್ದರಾಮಯ್ಯ. ರೈತರ ದಾರಿ ತಪ್ಪಿಸಿದ್ರಾ ಜೋಶಿ

ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಬಹುದಿನಗಳ ಮಹಾದಾಯಿ ಹೋರಾಟ ಸಧ್ಯ ನಿಲ್ಲುವ ಹಾಗೆ ಕಾಣ್ತಿಲ್ಲ. ಮಹಾದಾಯಿ ಕುರಿತು ಇಂದು ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಮಹಾದಾಯಿ ಯೋಜನೆ ಅನುಷ್ಟಾನಗೊಳಿಸಲು ಸಿದ್ದವಿದೆ. ಆದರೆ ಕೇಂದ್ರ ಸರ್ಕಾರ ಅರಣ್ಯ ಮತ್ತು ಪರಿಸರ ತೆರವು ಕುರಿತು ನಿರ್ಧಾರ ತೆಗೆದುಕೊಳ್ಳದೆ ಇರೋ ಕಾರಣ ಹಿನ್ನೆಡೆಯಾಗಿದೆ ಎಂದ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಯೋಜನೆಗೆ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಹಸಿರು ನಿಶಾನೆ ಸಿಕ್ಕ ಕೊಡಲೇ ಕಾಮಗಾರಿ ಆರಂಭ ಮಾಡ್ತೀವಿ ಎಂದು ಹೇಳಿದರು.

 

ಮತ್ತೊಂದೆಡೆ ಕಳೆದ ವಾರ ಹುಬ್ಬಳ್ಳಿಯಲ್ಲಿ ಮಹಾದಾಯಿ ಕುರಿತು ಮಾತನಾಡಿದ್ದ ಕೇಂದ್ರ ಸಚಿವ ಪ್ರಲ್ಲಾದ ಜೋಶಿ, ರಾಜ್ಯ ಸರ್ಕಾರ ವನ್ಯಜೀವಿ ಕುರಿತು ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು. ಮಹಾದಾಯಿ ಯೋಜನೆಗೆ ತೊಡಕಾಗಿದ್ದ ಎಲ್ಲಾ ಕೆಲಸಗಳು ಮುಗಿದಿವೆ ಎಂದು ಹೇಳಿದ ಬೆನ್ನಲ್ಲೇ ಇಂದು ಸಿದ್ದರಾಮಯ್ಯ ಮತ್ತೆ ಕೇಂದ್ರದ ಕಡೆ ಕೈ ಮಾಡಿದ್ದಾರೆ. ಅರಣ್ಯ ಮತ್ತು ಪರಿಸರ ಕುರಿತು ಗ್ರೀನ್ ಸಿಗ್ನಲ್ ಸಿಕ್ಕರೆ ಮಹಾದಾಯಿ ಯೋಜನೆ ಅನುಷ್ಠಾನಗೊಳ್ಳಲಿದೆ. ಮಹಾದಾಯಿ ವಿಷಯದಲ್ಲಿ ಕೇಂದ್ರ ಸಚಿವ ಜೋಶಿ ರೈತರ ದಾರಿ ತಪ್ಪಿಸಿದ್ರಾ ಅನ್ನೋ ಮಾತು ಕೇಳಿ ಬರುತ್ತಿವೆ.

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ತಿರುಪತಿ ದೇವಸ್ಥಾನಕ್ಕೆ ತುಪ್ಪ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿ / ತುಪ್ಪ ಗ್ರಾಮಸ್ಥರ ಪಾಲು

ತಿರುಪತಿಯ ತಿರುಮಲ ದೇವಸ್ಥಾನಕ್ಕೆ 21000 ಲೀಟರ್ ತುಪ್ಪವನ್ನು ಸಾಗಿಸುತ್ತಿದ್ದ ಟ್ಯಾಂಕರ್ ಕಡಪ ಜಿಲ್ಲೆ ಕೊಂಡಾಪುರದಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ತುಪ್ಪಿಕೊಂಡು ಹೊರಟಿದ್ದ ಟ್ಯಾಂಕರ್ ಪಲ್ಟಿಯಾದ ಪರಿಣಾಮ, ತುಪ್ಪ

Live Cricket

error: Content is protected !!