Download Our App

Follow us

Home » ಹಬ್ಬಗಳು » ಡಿ ಜೆ ಸೌಂಡಿಗೆ ಹೃದಯಾಘಾತ. ಮಹಿಳೆ ಸಾವು.

ಡಿ ಜೆ ಸೌಂಡಿಗೆ ಹೃದಯಾಘಾತ. ಮಹಿಳೆ ಸಾವು.

ಗಣೇಶ ಮೆರವಣಿಗೆ ವೇಳೆ ಡಿ ಜೆ ಸೌಂಡಿಗೆ ಕುಣಿಯುತ್ತಿದ್ದ ಮಹಿಳೆ ಹೃದಯಾಘಾತದಿಂದಾಗಿ ಸಾವನನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ರಾಯಚೂರಿನ ಜಲಾಲ್ ನಗರದಲ್ಲಿ ನಡೆದಿದೆ. ಸೆಪ್ಟೆಂಬರ್ 23 ರಂದು ಈ ಘಟನೆ ನಡೆದಿದೆ. ಡಿ ಜೆ ಸೌಂಡಿಗೆ 56 ವರ್ಷದ ಮಹಿಳೆ ಅನಂತಮ್ಮ ಎಂಬಾಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಅನಂತಮ್ಮ ಮನೆ ಎದುರು ಗಣೇಶ ಮೆರವಣಿಗೆ ಬಂದಾಗ ಡಿ ಜೆ ಸೌಂಡಿಗೆ ಕುಣಿಯುತ್ತಿದ್ದಳು. ಪಕ್ಕದ ಮನೆಯ ಯುವಕ ಅನಂತಮ್ಮ ಕುಣಿಯುವ ದೃಶ್ಯ ಮೊಬೈಲ್ ನಲ್ಲಿ ಸೆರೆಹಿಡಿಯುತ್ತಿದ್ದ. ಕುಸಿದು ಬಿದ್ದ ಅನಂತಮ್ಮಳನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ದಲ್ಲಿಯೇ ಪ್ರಾಣ ಬಿಟ್ಟಿದ್ದಾಳೆ. ಅನಂತಮ್ಮ ಕುಸಿದು ಬೀಳುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!