ತಾಂತ್ರಿಕತೆ ಬೆಳೆದಂತೆಲ್ಲ, ಐನಾತಿ ಕಳ್ಳರು ಹುಟ್ಟಿಕೊಂಡಿದ್ದಾರೆ. ದೇಶದಲ್ಲಿ ಇದೀಗ ಸೈಬರ್ ಕ್ರೈಮ್ ಸದ್ದು ಮಾಡುತ್ತಿದೆ. ” ಸೈಬರ್ ಕ್ರೈಮ್” ನಲ್ಲಿ ಕಲಿತವರೆ ಹೆಚ್ಚು ಕಳ್ಳರಾಗುತ್ತಿದ್ದಾರೆ. ಅನೇಕ ಶಾಪಿಂಗ್ ಮಾಲ್ ಗಳಲ್ಲಿ, ಐಷಾರಾಮಿ ಹೋಟೆಲ್ ಗಳಲ್ಲಿ, ಕೋಚಿಂಗ್ ಸೆಂಟರಗಳಲ್ಲಿ ಉಚಿತ ವೈಫೈ ನೀಡಲಾಗುತ್ತದೆ.
ವೈಫೈ ಉಚಿತವಾಗಿ ಸಿಗುವ ಸ್ಥಳದಲ್ಲಿ ಬಹಳಷ್ಟು ಜನ ಸ್ವಂತ ಇಂಟರನೆಟ್ ಬಂದ ಮಾಡಿ, ವೈಫೈ ಬಳಕೆ ಮಾಡುತ್ತಾರೆ. ಹೀಗೆ ವೈಫೈ ಬಳಕೆ ಮಾಡುವವರು ಆಕಸ್ಮಾತ ಮೊಬೈಲ್ ನಲ್ಲಿ ಹಣ ವರ್ಗಾವಣೆ ಮಾಡಿದರೆ ಅವರ ಕಥೆ ಮುಗಿಯಿತು. ವರ್ಗಾವಣೆ ಮಾಡಿದ ಹಣ ಸೀದಾ ಸೈಬರ್ ಕಳ್ಳರ ಜೇಬಿಗೆ ಹೋಗುವ ಸಂಭವ ಬಹಳಷ್ಟಿದೆ. ಪೊಲೀಸ್ ಇಲಾಖೆ ಕೂಡಾ ಸೈಬರ್ ಕ್ರೈಮ್ ಬಗ್ಗೆ ಎಚ್ಚರಿಸಿದರು, ಮತ್ತೆ ಮತ್ತೆ ಇಂತಹ ಘಟನೆಗಳು ನಡೆಯುತ್ತಿವೆ.
Author: Karnataka Files
Post Views: 2





