ಧಾರವಾಡ ಶಹರ ಠಾಣೆ ವ್ಯಾಪ್ತಿಯಲ್ಲಿ ನಿನ್ನೇ ರಾತ್ರಿ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮದಾರಮಡ್ಡಿಯ ಅನುಪ ನೀಲಣ್ಣವರ ಎಂಬುವವನ ಮೇಲೆ, ಲಕ್ಷ್ಮಿ ಸಿಂಗನ ಕೇರಿಯ ತಿರುಪತಿ ಹಿರೇಮನಿ ಗ್ಯಾಂಗ ಹಲ್ಲೆ ಮಾಡಿತ್ತು. ಹಲ್ಲೆ ನಡೆದ ತಕ್ಷಣ ಫೀಲ್ಡಿಗಿಳಿದ ಪೊಲೀಸರು ಮದ್ಯರಾತ್ರಿ ಕಾರ್ಯಾಚರಣೆ ನಡೆಸಿ 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಅಟ್ಟಹಾಸ ಮೆರೆದವರ ಹೆಡಮುರಿಗೆ ಕಟ್ಟಿದ ಇನ್ಸಪೆಕ್ಟರ ಕಾಡದೇವರಮಠ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
Author: Karnataka Files
Post Views: 2





