ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ 15 ಅಡಿ ಉದ್ದದ ಬೃಹತ ಮೊಸಳೆ ಪತ್ತೆಯಾಗಿದೆ. ವಿದ್ಯುತ್ ಅಭಾವದಿಂದ ಗ್ರಾಮದಲ್ಲಿ ಕತ್ತಲು ಆವರಿಸಿದ ವೇಳೆ ಬೃಹತ್ ಗಾತ್ರದ ಮೊಸಳೆ ಕಂಡು ಬಂದಿದೆ.
ಝುಂಜರವಾಡ ಗ್ರಾಮ ನದಿ ದಂಡೆಯ ಮೇಲೆ ಇದ್ದು, ಮೊದಲ ಬಾರಿ ೧೫ ಅಡಿ ಉದ್ದದ ಬೃಹತ್ ಮೊಸಳೆ ಗ್ರಾಮದ ರಸ್ತೆಯಲ್ಲಿ ಪ್ರತ್ಯಕ್ಷವಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ಮಹಿಳೆಯರು ಬಯಲು ಶೌಚಕ್ಕೆ ಹೋದಂತ ಸಮಯದಲ್ಲಿ ಗ್ರಾಮಸ್ಥರಿಗೆ ಕಾಣಿಸಿಕೊಂಡಿದ್ದು, ಮತ್ತಷ್ಟು ಮೊಸಳೆ ಇರಬಹುದು ಎಂದು ಶಂಕಿಸಲಾಗಿದೆ.
Author: Karnataka Files
Post Views: 10





