Download Our App

Follow us

Home » ರಾಜಕೀಯ » ಈ ತಿಂಗಳ ಕೊನೆಗೆ ನಿಗಮ ಮಂಡಳಿ ರಚನೆ. 25 ಶಾಸಕರಿಗೆ ಮೊದಲ ಹಂತದ ನೇಮಕ. ಅಬ್ಬಯ್ಯ – KRIDL , ಬಿ ಆರ್ ಪಾಟೀಲ್ – ಯೋಜನಾ ಮಂಡಳಿ ಉಪಾಧ್ಯಕ್ಷ !

ಈ ತಿಂಗಳ ಕೊನೆಗೆ ನಿಗಮ ಮಂಡಳಿ ರಚನೆ. 25 ಶಾಸಕರಿಗೆ ಮೊದಲ ಹಂತದ ನೇಮಕ. ಅಬ್ಬಯ್ಯ – KRIDL , ಬಿ ಆರ್ ಪಾಟೀಲ್ – ಯೋಜನಾ ಮಂಡಳಿ ಉಪಾಧ್ಯಕ್ಷ !

ಬೆಂಗಳೂರು –  ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರದಲ್ಲಿ ನಿಗಮ ಮಂಡಳಿಗೆ ನೇಮಕ ಮಾಡುವ ಪ್ರಕ್ರೀಯೆ ಆರಂಭವಾಗಿದೆ. ಈ ತಿಂಗಳ ಕೊನೆಯಲ್ಲಿ ನಿಗಮ ಮಂಡಳಿಗಳು ರಚನೆಯಾಗಲಿದೆ ಎಂದು ತಿಳಿದು ಬಂದಿದೆ. ಸಚಿವ ಸ್ಥಾನ ವಂಚಿತರನ್ನು ಸಮಾಧಾನ ಮಾಡುವ ನಿಟ್ಟಿನಲ್ಲಿ ಆಯಕಟ್ಟಿನ ಸ್ಥಾನಗಳನ್ನು ನೀಡಲು ಕಾಂಗ್ರೇಸ್ ಉಸ್ತುವಾರಿ ಸುರ್ಜೆವಾಲಾ ಪಟ್ಟಿ ನೀಡುವಂತೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಹೇಳಿದ್ದಾರೆ ಎನ್ನಲಾಗಿದೆ.

ಅಸಮಾಧಾನಗೊಂಡಿರುವ ಶಾಸಕರಿಗೆ ಪ್ರಾದಾನ್ಯತೆ ಮೇಲೆ ನಿಗಮ ಮಂಡಳಿ ಕೊಡುವ ತೀರ್ಮಾನಕ್ಕೆ ಬರಲಾಗಿದ್ದು, ಆಳಂದ ಶಾಸಕ ಬಿ ಆರ್ ಪಾಟೀಲ್, ಯೋಜನಾ ಮಂಡಳಿ ಉಪಾಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಕಾಂಗ್ರೇಸ್ ಸ್ವಂತ ಬಲದ ಮೇಲೆ 135 ಸ್ಥಾನಗಳನ್ನು ಗೆದ್ದು ಬೀಗಿದ್ದು, ಸಹಜವಾಗಿ ನಿಗಮ ಮಂಡಳಿ ಮೇಲೆ ಅನೇಕರ ಕಣ್ಣು ಬಿದ್ದಿದೆ.

ಮೊದಲ ಹಂತದಲ್ಲಿ 25 ಶಾಸಕರನ್ನು ನಿಗಮ ಮಂಡಳಿಗೆ ನೇಮಕ ಮಾಡಲಾಗುವದು ಎಂದು ಹೇಳಲಾಗಿದ್ದು, ಲೋಕಸಭಾ ಚುನಾವಣೆ ನಂತರವೇ ನಿಗಮ ಮಂಡಳಿಗೆ ಸಂಪೂರ್ಣ ನೇಮಕ ಮಾಡಲು ಯೋಚಿಸಲಾಗಿದೆ. ಕೆ ಆರ್ ಐ ಡಿ ಎಲ್ ( land army )   ಅಧ್ಯಕ್ಷ ಸ್ಥಾನಕ್ಕೆ, ಹುಬ್ಬಳ್ಳಿ ಪೂರ್ವ ಶಾಸಕ ಪ್ರಸಾದ ಅಬ್ಬಯ್ಯ ನವರ ಹೆಸರು ಬಹುತೇಕ ಅಂತಿಮವಾಗಿದೆ ಎನ್ನಲಾಗಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಸಾರಿಗೆ ಸಂಸ್ಥೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ಮಹತ್ವದ ನಿಗಮಗಳ ಮೇಲೆ ಶಾಸಕರು ಕಣ್ಣಿಟ್ಟಿದ್ದು, ಈಗಿನಿಂದಲೇ ಲಾಭಿ ನಡೆಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಆರ್ ಎಸ್ ಎಸ್ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ ಬಿಜೆಪಿ ಸಂಸದ ಜಿಗಜಿಣಗಿ / RSS ನವರು ಸೂ….. ಮಕ್ಕಳು ಎಂದ ಮುತ್ಯಾ / ಅಡಿಯೋ ಇದೆ ಕೇಳಿ

ಗೃಹ ಸಚಿವ ಪ್ರಿಯಾಂಕ್ ಖರ್ಗೆ RSS ನೋಂದಣಿ ಕುರಿತು ಹೇಳಿಕೆ ಕೊಟ್ಟ ಬೆನ್ನಲ್ಲೇ, ವಿಜಯಪುರದ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅಡಿಯೋ ಇದೀಗ ವೈರಲ್ ಆಗಿದೆ. ರಮೇಶ

Live Cricket

error: Content is protected !!