Download Our App

Follow us

Home » ರಾಜಕೀಯ » ಲೋಕಸಭಾ ಚುನಾವಣೆವರೆಗೆ ಮಾತ್ರ ವಿಜಯೇಂದ್ರ ಬಿಜೆಪಿ ಅಧ್ಯಕ್ಷ ! ಕಿಚಾಯಿಸಿದ ಕಾಂಗ್ರೇಸ್.

ಲೋಕಸಭಾ ಚುನಾವಣೆವರೆಗೆ ಮಾತ್ರ ವಿಜಯೇಂದ್ರ ಬಿಜೆಪಿ ಅಧ್ಯಕ್ಷ ! ಕಿಚಾಯಿಸಿದ ಕಾಂಗ್ರೇಸ್.

ಕರ್ನಾಟಕ ಕಾಂಗ್ರೇಸ್, ಎಂದಿನಂತೆ ಬಿಜೆಪಿಗರ ಕಾಲೆಳೆಯುತ್ತಲೇ, ನೂತನ ಬಿಜೆಪಿ ಅಧ್ಯಕ್ಷರ ನೇಮಕವನ್ನು ಸ್ವಾಗತಿಸಿದೆ. ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿರುವ, ಹೈಕಮಾಂಡ, ಲೋಕಸಭೆ ಚುನಾವಣೆವರೆಗೆ ಮಾತ್ರ ಈ ಆಯ್ಕೆ ಎಂದು ವ್ಯಂಗ್ಯವಾಡಿದೆ.

ಯಡಿಯೂರಪ್ಪನವರ ಮಗನ ರಾಜ್ಯಾಧ್ಯಕ್ಷ ಹುದ್ದೆ ಕೇವಲ ಲೋಕಸಭೆ ಚುನಾವಣೆವರೆಗೆ ಮಾತ್ರ ಎಂಬ ಗುಸುಗುಸು ಪಿಸುಪಿಸು ಜಗನ್ನಾಥ ಭವನದಲ್ಲಿ ಕೇಳಿ ಬರುತ್ತಿದೆಯಂತೆ! ಈ ಮಾತು ಸಿ ಟಿ ರವಿ, ಬಸನಗೌಡ ಪಾಟೀಲ ಯತ್ನಾಳ ಮತ್ತು ಬಿ ಎಲ್ ಸಂತೋಷರನ್ನು ಸಮಾಧಾನಪಡಿಸಲೋ, ಅಥವಾ ಆಯ್ಕೆಯಲ್ಲಿ ನೈಜತೆ ಇದೆಯೋ ಅನ್ನೋದನ್ನ ಕರ್ನಾಟಕ ಬಿಜೆಪಿ ಸ್ಪಷ್ಟಪಡಿಸಬೇಕು ಎಂದು ಕರ್ನಾಟಕ ಕಾಂಗ್ರೇಸ್ ಟ್ವಿಟ್ ಮಾಡಿ ಆಗ್ರಹಿಸಿದೆ. ಬಿಜೆಪಿಯನ್ನು ಕುಟುಂಬ ಜನತಾ ಪಕ್ಷ ಎಂದು ಕರೆಯುವ ಮೂಲಕ ಮತ್ತಷ್ಟು ಕಿಚಾಯಿಸಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!