ಇಜಾಜ್ ದಂಡಿನ ಮೂಲತಃ ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಗ್ರಾಮದ ಯುವಕ. ಕಾಂಗ್ರೇಸ್ ಯುವ ಘಟಕದಲ್ಲಿ ಪಾದರಸದಂತೆ ಆರಿಸಿಕೊಂಡು ಪಕ್ಷ ಸಂಘಟನೆ ಮಾಡಿದ್ದ ಇಜಾಜ್ ಗೆ ತೆಲಂಗಾಣದ ಉಸ್ತುವಾರಿ ಜವಾಬ್ದಾರಿಯನ್ನು ನೀಡಿದೆ. ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದು, ಇಜಾಜ್ ದಂಡಿನಗೆ ತೆಲಂಗಾಣದ ನಗರಕರ್ನುಲ್ ಲೋಕಸಭಾ ಕ್ಷೇತ್ರದ ಉಸ್ತುವಾರಿ ವಹಿಸಲಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ಸಿನ ತೆಲಂಗಾಣದ ಉಸ್ತುವಾರಿ ಮಾಣಿಕರಾವ ಠಾಕೂರ, ಇಜಾಜ್ನಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಸಣ್ಣ ವಯಸ್ಸಿನಲ್ಲಿ ಇಜಾಜ್ ಗೆ ತೆಲಂಗಾಣದ ಮಂಡಲ ಉಸ್ತುವಾರಿ ವಹಿಸಿದ್ದು, ಇಜಾಜ್ ಕಳೆದೊಂದು ವಾರದಿಂದ ನಾಗರಕರ್ನುಲ್ ನಲ್ಲಿ ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
Author: Karnataka Files
Post Views: 5





