Download Our App

Follow us

Home » ರಾಜಕೀಯ » ಪಂಚಮಸಾಲಿ ಮೀಸಲಾತಿ. ಸಿಡಿದೆದ್ದ ಜಯ ಮೃತ್ಯುಂಜಯ ಸ್ವಾಮೀಜಿ. 13 ಕ್ಕೆ ಬೃಹತ್ ಹೋರಾಟಕ್ಕೆ ಕರೆ

ಪಂಚಮಸಾಲಿ ಮೀಸಲಾತಿ. ಸಿಡಿದೆದ್ದ ಜಯ ಮೃತ್ಯುಂಜಯ ಸ್ವಾಮೀಜಿ. 13 ಕ್ಕೆ ಬೃಹತ್ ಹೋರಾಟಕ್ಕೆ ಕರೆ

ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಬೆಳಗಾವಿ ಮತ್ತೊಮ್ಮೆ ಅಣಿಯಾಗುತ್ತಿದೆ. ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿಗೆ ಆಗ್ರಹಿಸಿ ಕಳೆದೆರೆಡು ವರ್ಷಗಳಿಂದ ನಡೆದಿರುವ ಹೋರಾಟ ಇಂದಿಗೂ ಮುಂದುವರೆದಿದೆ.

ಕೂಡಲಸಂಗಮದ ಜಗದ್ಗುರು ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದಿರುವ ಹೋರಾಟಕ್ಕೆ ಸರ್ಕಾರ ಮಣೆಯದಿರುವದು ಸ್ವಾಮೀಜಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 13 ರಂದು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಿಂದ ಸುವರ್ಣಸೌಧದ ವರೆಗೆ ಪಾದಯಾತ್ರೆ ನಡೆಸಲು ಜಯ ಮೃತ್ಯುಂಜಯ ಸ್ವಾಮೀಜಿ ಕರೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು ಅಧಿವೇಶನದ ನಂತರ ಈ ಬಗ್ಗೆ ಚರ್ಚೆ ಮಾಡುವದಾಗಿ ಹೇಳಿದ್ದು, ನಮಗೆ ಸಮಾಧಾನ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮೀಸಲಾತಿ ಕೊಡದೆ ಹೋದರೆ, ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷಕ್ಕೆ ಸಮುದಾಯದ ಜನ ತಕ್ಕ ಶಾಸ್ತಿ ಮಾಡಲಿದ್ದಾರೆಂದು ಎಚ್ಚರಿಕೆ ನೀಡಿದರು. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಆರ್ ಎಸ್ ಎಸ್ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ ಬಿಜೆಪಿ ಸಂಸದ ಜಿಗಜಿಣಗಿ / RSS ನವರು ಸೂ….. ಮಕ್ಕಳು ಎಂದ ಮುತ್ಯಾ / ಅಡಿಯೋ ಇದೆ ಕೇಳಿ

ಗೃಹ ಸಚಿವ ಪ್ರಿಯಾಂಕ್ ಖರ್ಗೆ RSS ನೋಂದಣಿ ಕುರಿತು ಹೇಳಿಕೆ ಕೊಟ್ಟ ಬೆನ್ನಲ್ಲೇ, ವಿಜಯಪುರದ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅಡಿಯೋ ಇದೀಗ ವೈರಲ್ ಆಗಿದೆ. ರಮೇಶ

Live Cricket

error: Content is protected !!