Download Our App

Follow us

Home » ಕಾನೂನು » ರಮೇಶಗೆ ಎದುರಾದ ಕಂಟಕ. ಕೋರ್ಟ್ ಕದ ತಟ್ಟಿದ ಗೋಕಾಕ ಸಾಹುಕಾರ

ರಮೇಶಗೆ ಎದುರಾದ ಕಂಟಕ. ಕೋರ್ಟ್ ಕದ ತಟ್ಟಿದ ಗೋಕಾಕ ಸಾಹುಕಾರ

ಸದಾ ಸುದ್ದಿಯಲ್ಲಿರುವ ಗೋಕಾಕದ ಶಾಸಕ ರಮೇಶ ಜಾರಕಿಹೊಳಿಯವರಿಗೆ ಇದೀಗ ಕಂಟಕ ಎದುರಾಗಿದೆ. ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆಂದು ಪಡೆದ ಸಾಲ ತೀರಿಸದೆ ರಮೇಶ ಬ್ಯಾಂಕಿಗೆ ವಂಚನೆ ಮಾಡಿದ್ದಾರೆಂದು ಅಪೆಕ್ಸ್ ಬ್ಯಾಂಕ ವ್ಯವಸ್ಥಾಪಕ ನಿರ್ದೇಶಕ ನೀಡಿದ ದೂರಿನ ಅನ್ವಯ ಅವರ ಮೇಲೆ ಕೇಸ್ ಧಾಖಲಾಗಿದೆ. ರಮೇಶ್ ಮೇಲೆ ಐ ಪಿ ಸಿ ಸೆಕ್ಷನ್ 406, 420 & 34 ರ ಅಡಿ ಪ್ರಕರಣ ಧಾಖಲಾಗಿದೆ.

ಅಸಲು ಬಡ್ಡಿ ಸೇರಿ 439 ಕೋಟಿ ರೂಪಾಯಿ ಪಾವತಿಸದ ಆರೋಪ ಹೊತ್ತ ಸೌಭಾಗ್ಯಲಕ್ಸ್ಮಿ ಶುಗರ್ಸ್ ಲಿಮಿಟೆಡ್ ಎಮ್ ಡಿ ರಮೇಶ್ ಜಾರಕಿಹೊಳಿ, ತಮ್ಮ ವಿರುದ್ದ ಧಾಖಲಾದ ಎಫ್ ಐ ಆರ್ ರದ್ದು ಮಾಡುವಂತೆ ಕೋರಿ ಹೈಕೋರ್ಟ್ ಮೆಟ್ಟಲೇರಿದ್ದಾರೆ. ನ್ಯಾಯಮೂರ್ತಿ ಕೃಷ್ಣ ದೀಕ್ಷಿತ ಮುಂದಿನ ವಾರ ವಿಚಾರಣೆಗೆ ಪರಿಗಣಿಸುವದಾಗಿ ಹೇಳಿದ್ದಾರೆ.

ರಮೇಶ ಜಾರಕಿಹೊಳಿ ಬಂಡವಾಳದ ರೂಪದಲ್ಲಿ ಅಪೆಕ್ಸ್ ಬ್ಯಾಂಕ ಮತ್ತು ಅದರ ಸಮೂಹದ ಬ್ಯಾಂಕಗಳಲ್ಲಿ 12-07-2013 ರಿಂದ 31-03-2017 ರ ಅವಧಿಯಲ್ಲಿ 232.88 ಕೋಟಿ ಸಾಲ ಪಡೆದಿದ್ದರು, ಅದು ಈಗ ಅಸಲು ಬಡ್ಡಿ ಸೇರಿ 439.7 ಕೋಟಿಗೆ ಏರಿಕೆಯಾಗಿದ್ದರು, ಅದನ್ನು ಇನ್ನೂವರೆಗೆ ಪಾವತಿಸಿಲ್ಲ ಎಂದು ಅಪೆಕ್ಸ್ ಬ್ಯಾಂಕ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಆರ್ ಎಸ್ ಎಸ್ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ ಬಿಜೆಪಿ ಸಂಸದ ಜಿಗಜಿಣಗಿ / RSS ನವರು ಸೂ….. ಮಕ್ಕಳು ಎಂದ ಮುತ್ಯಾ / ಅಡಿಯೋ ಇದೆ ಕೇಳಿ

ಗೃಹ ಸಚಿವ ಪ್ರಿಯಾಂಕ್ ಖರ್ಗೆ RSS ನೋಂದಣಿ ಕುರಿತು ಹೇಳಿಕೆ ಕೊಟ್ಟ ಬೆನ್ನಲ್ಲೇ, ವಿಜಯಪುರದ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅಡಿಯೋ ಇದೀಗ ವೈರಲ್ ಆಗಿದೆ. ರಮೇಶ

Live Cricket

error: Content is protected !!