ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ತಳಮಳ ಸೃಷ್ಟಿಯಾಗಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಡಿ ವಿ ಸದಾನಂದಗೌಡ ನಾಳೆ ಕಾಂಗ್ರೇಸ್ ಸೇರುವದು ಖಚಿತವಾಗಿದೆ.
ಸದಾನಂದಗೌಡರ ಬದಲಿಗೆ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಶೋಭಕ್ಕನಿಗೆ ಟಿಕೇಟ ಕೊಟ್ಟಿದ್ದು, ಸದಾನಂದಗೌಡರ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ವಿರುದ್ಧ ಸಿಡಿದೆದ್ದಿರುವ ಕೆ ಎಸ್ ಈಶ್ವರಪ್ಪ ಈಗಾಗಲೇ ಪಕ್ಷೇತರನಾಗಿ ಶಿವಮೊಗ್ಗದಿಂದ ಸ್ಪರ್ಧೆ ಮಾಡುವದಾಗಿ ಹೇಳಿದ್ದು, ಮತ್ತೊಂದೆಡೆ ಸದಾನಂದಗೌಡ ಬಿಜೆಪಿ ತೊರೆಯಲು ಮುಂದಾಗಿದ್ದಾರೆ.
ಸದಾನಂದಗೌಡರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಮಾತುಕತೆ ನಡೆಸಿದ್ದು, ಸದಾನಂದಗೌಡರನ್ನು ಮೈಸೂರು ಅಥವಾ ಬೆಂಗಳೂರು ಉತ್ತರದಿಂದ ಕಣಕ್ಕಿಳಿಸಲು ಕಾಂಗ್ರೇಸ್ ನಾಯಕರು ಚರ್ಚೆ ನಡೆಸುತ್ತಿದ್ದಾರೆ.
ಅಂದುಕೊಂಡಂಗೆ ನಡೆದರೆ ನಾಳೆ ಬೆಳಿಗ್ಗೆ ಸದಾನಂದಗೌಡ ಕಾಂಗ್ರೇಸ್ ಸೇರ್ಪಡೆಯಾಗಲಿದ್ದಾರೆ. ಬಿಜೆಪಿ ಟಿಕೇಟ ಘೋಷಣೆ ನಂತರ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ದಾವಣಗೆರೆ, ಬೆಂಗಳೂರು ಉತ್ತರ, ಬೆಳಗಾವಿ, ತುಮಕೂರು ಶಿವಮೊಗ್ಗ, ಮೈಸೂರು ಕೊಡಗು, ಚಿಕ್ಕಮಂಗಳೂರು ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯ ಎದುರಾಗಿದೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆ, ಬಿಜೆಪಿಯಲ್ಲಿ ಭಿನ್ನಮತ ಜೋರಾಗಿದ್ದು, ಕಾಂಗ್ರೇಸ್ ಅಸಮಾಧಾನಗೊಂಡವರಿಗೆ ಅಭಯ ನೀಡುತ್ತಿದೆ.





