Download Our App

Follow us

Home » ರಾಜಕೀಯ » ಮೊದಲ ಬಾರಿಗೆ ಮತದಾನ ಮಾಡಿದ ನಾಗವೇಣಿ. ಆಕೆ ಹೇಳಿದ್ದೇನು ಗೊತ್ತಾ ? ನಾಚಿಕೆಯಾಗಬೇಕು………

ಮೊದಲ ಬಾರಿಗೆ ಮತದಾನ ಮಾಡಿದ ನಾಗವೇಣಿ. ಆಕೆ ಹೇಳಿದ್ದೇನು ಗೊತ್ತಾ ? ನಾಚಿಕೆಯಾಗಬೇಕು………

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಮತದಾನ ಆರಂಭವಾಗಿದೆ. ಬೆಳಿಗ್ಗೆಯಿಂದಲೇ ಮತಗಟ್ಟೆಗಳಲ್ಲಿ ಜನಜಂಗುಳಿ ಕಂಡು ಬಂದಿದೆ. 

ಇದೆಲ್ಲದರ ಮದ್ಯೆ ಮೊದಲ ಬಾರಿಗೆ ಮತದಾನ ಮಾಡಿದ ಯುವಕ, ಯುವತಿಯರು ಸಂಭ್ರಮದಿಂದ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಧಾರವಾಡದ ಜ್ಞಾನ ವಿಹಾರ ಮತಗಟ್ಟೆಯಲ್ಲಿ ನಾಗವೇಣಿ ನಾಗನಗೌಡ ಪಾಟೀಲ ಮೊದಲ ಬಾರಿಗೆ ಮತದಾನ ಮಾಡಿದ್ದಾಳೆ.

ಪ್ರಜಾಪ್ರಭುತ್ವದ ಅತ್ಯಂತ ದೊಡ್ಡ ಹಬ್ಬದಲ್ಲಿ ಮೊದಲ ಬಾರಿಗೆ ಹಕ್ಕು ಚಲಾಯಿಸಿದ್ದೇನೆ. ನನಗೆ ಅತ್ಯಂತ ಖುಷಿ ಕೊಟ್ಟಿದ ದಿನ ಎಂದು ಹೇಳಿದ ನಾಗವೇಣಿ, ಬಿಸಿಲು ಇದೆ ಎಂದು ಹೇಳಿ ಮನೆಯಲ್ಲಿ ಕುಳಿತುಕೊಳ್ಳಬೇಡಿ, ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿ ಎಂದು ಮನವಿ ಮಾಡಿದ್ದಾಳೆ.

ಕೇವಲ ವಾಟ್ಸಪ್, ಫೇಸ್ ಬುಕ್ ನಲ್ಲಿ ದೇಶದ ಬಗ್ಗೆ ಚಿಂತೆ ಮಾಡುವ ಬುದ್ದಿವಂತರು, ಮತ ಚಲಾಯಿಸಲು ಬರಲ್ಲ. ಮೊನ್ನೆ ಬೆಂಗಳೂರಿನಲ್ಲಿ ನಡೆದ ಮೊದಲ ಹಂತದ ಮತದಾನವೆ ಸಾಕ್ಷಿ ಎಂದಿದ್ದಾರೆ. ಮತದಾನದ ದಿನ ರಜೆ ದಿನ ಎಂದು ತಿಳಿದು ಮನೆಯಲ್ಲಿ ಕುಳಿತುಕೊಳ್ಳದೆ, ಮತಗಟ್ಟೆಗೆ ಬಂದು ಮತ ಚಲಾಯಿಸಿ ಎಂದು ನಾಗವೇಣಿ ಮನವಿ ಮಾಡಿದ್ದಾಳೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನ್ಯೂ ಕಮಿಷನರ್ ಸೈಲೆಂಟ್ ಸ್ಟ್ರೋಕ್ : ಅವಳಿ ನಗರದಲ್ಲಿ ಅಸಲಿ ಖಾಕಿ ಖದರ್ ಶುರು….

ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯಲ್ಲಿ ಚಾಕು ಇರಿತ ಪ್ರಕರಣಗಳನ್ನು ಹತ್ತಿಕ್ಕಲು ಹೊಸದಾಗಿ ಬಂದಿರುವ ಪೊಲೀಸ್ ಕಮಿಷನರ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಅವಳಿ ನಗರದಲ್ಲಿ ಚಾಕು, ತಲ್ವಾರ್ ಸೇರಿದಂತೆ ಮಾರಕಾಸ್ತ್ರಗಳನ್ನು

Live Cricket

error: Content is protected !!