ಯರಗಟ್ಟಿ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರದ ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕರ ವೃಂದ ಹಾಗೂ ಪಟ್ಟಣದ ಹಿರಿಯರು ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರಾದ ಶ್ರೀ ರಫೀಕ ಡಿ ಕೆ ಅವರನ್ನು ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಹಿರಿಯರಾದ ಭಾಸ್ಕರ್ ಹಿರೇಮೇತ್ರಿ, ಸಮಾಜದಲ್ಲಿ ಅನ್ಯಾಯವಾದಾಗ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿ, ನ್ಯಾಯ ಒದಗಿಸುವ ಕಾರ್ಯ ಶ್ಲಾಘನೀಯ ಎಂದರು. ಅದಕ್ಕಾಗಿ ರಾಜ್ಯೋತ್ಸವ ಪ್ರಶಸ್ತಿ ಮತ್ತಷ್ಟು ಅವರ ಜವಾಬ್ದಾರಿ ಹೆಚ್ಚಿಸಿದೆ ಎಂದರು.
ಇನ್ನು ಹಲವಾರು ಪ್ರಶಸ್ತಿ ಗೌರವಗಳು ಇವರಿಗೆ ಲಭಿಸಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಕೆ ಎಫ್ ನದಾಫ್, ಬಾಬು ಚನ್ನಮೇತ್ರಿ, ಪುಂಡಲೀಕ ತಳವಾರ, ಮಲ್ಲೂರ ಸರ್, ಗಂಗೂರ ಸರ್, ಭಜಂತ್ರಿ ಸರ್, ಶಿಕ್ಷಕಿಯರಾದ ಗೌಡರ, ಕುಲಕರ್ಣಿ, ನದಾಫ್ ಟೀಚರ್ ಇದ್ದರು
Author: Karnataka Files
Post Views: 7





