Download Our App

Follow us

Home » ಕಾನೂನು » ಹೊಸೂರನಲ್ಲಿ ವಕೀಲರ ಬರ್ಬರ ಕೊಲೆ ಖಂಡಿಸಿ, ಧಾರವಾಡ ವಕೀಲರ ಸಂಘದಿಂದ ಬೃಹತ್ ಪ್ರತಿಭಟನೆ

ಹೊಸೂರನಲ್ಲಿ ವಕೀಲರ ಬರ್ಬರ ಕೊಲೆ ಖಂಡಿಸಿ, ಧಾರವಾಡ ವಕೀಲರ ಸಂಘದಿಂದ ಬೃಹತ್ ಪ್ರತಿಭಟನೆ

ನಿನ್ನೇ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಹೊಸೂರನಲ್ಲಿ ಹಾಡುಹಗಲೇ ನಡೆದ, ವಕೀಲ ಕಣ್ಣನ ಅವರ ಕೊಲೆಯನ್ನು ಖಂಡಿಸಿ, ಧಾರವಾಡದಲ್ಲಿಂದು ವಕೀಲರು ಬೃಹತ್ ಪ್ರತಿಭಟನೆ ನಡೆಸಿದ್ರು. 

ಜಿಲ್ಲಾ ನ್ಯಾಯಾಲಯದಲ್ಲಿ ಸಭೆ ಸೇರಿದ ವಕೀಲರು ಘಟನೆಯನ್ನು ಅತ್ಯುಗ್ರವಾಗಿ ಖಂಡಿಸಿದರು. ಕಣ್ಣನ ಅವರಿಗೆ ಸಂತಾಪ ಸೂಚಿಸಿದ ವಕೀಲರ ಸಂಘ, ಕೊಲೆ ಖಂಡಿಸಿ, ಕೋರ್ಟ ಕಲಾಪ ಬಹಿಷ್ಕರಿಸಿತು.

ನಂತರ ಜೂಬಿಲಿ ಸರ್ಕಲ್ ನಲ್ಲಿ ಧರಣಿ ನಡೆಸಿ, ಕಣ್ಣನ ಎಂಬ ವಕೀಲರ ಕೊಲೆ ಮಾಡಿದ ಪಾತಕಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ರು. ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದ ವಕೀಲರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ರು.

ಆರೋಗ್ಯಕರ ಸಮಾಜದ ರಕ್ಷಣೆಗಾಗಿ ಸೇವೆ ಸಲ್ಲಿಸುತ್ತಿರುವ ವಕೀಲರ ಮೇಲೆ ಇಂತಹ ಘಟನೆಗಳು ನಡೆಯುತ್ತಿದ್ದು, ವಕೀಲರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ಏಣಗಿ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಮಾರು ಇನ್ನೂರು ವಕೀಲರು ಭಾಗವಹಿಸಿದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಫೈರೋಜ್ ಕೊಲೆ ಕೇಸ್ : ಇಸ್ಮಾಯಿಲ್ ತಮಟಗಾರ ವಿರುದ್ದ ರಾಜಕೀಯ ಷಡ್ಯಂತ್ರನಾ ? ನ್ಯಾಯ ಸಮ್ಮತ ತನಿಖೆ ಆಗಲಿ

ಉತ್ತರ ಕರ್ನಾಟಕದ ಮುಸ್ಲಿಮ್ ಸಮುದಾಯದಲ್ಲಿ ದೊಡ್ಡ ಹೆಸರು ಮಾಡುತ್ತಿದ್ದ ಇಸ್ಮಾಯಿಲ್ ತಮಟಗಾರ, ಆಡಿದ ಅದೊಂದು ಮಾತು ಅವರ ರಾಜಕೀಯ ಭವಿಷ್ಯಕ್ಕೆ ಬರೆ ನೀಡಿದೆ. ಆಳ, ಅಗಲ ಯೋಚಿಸದೆ

Live Cricket

error: Content is protected !!