ಶಾಸಕ ವಿನಯ ಕುಲಕರ್ಣಿಯವರ ಕುರಿತು ಆಧಾರ ರಹಿತ ಚಿತ್ರ, ವ್ಯಂಗ್ಯ ಭರಿತ ಮತ್ತು ನಕಾರಾತ್ಮಕ ಸುದ್ದಿ ಪ್ರಕಟ ಮಾಡಿದ್ದ ಖಾಸಗಿ ವಾಹಿನಿಯೊಂದಕ್ಕೆ ಹೈಕೋರ್ಟ್ ನ್ಯಾಯಾಂಗ ನಿಂದನೆಯ ಎಚ್ಚರಿಕೆ ನೀಡಿದೆ.

ನ್ಯಾಯಾಲಯದ ಆದೇಶದ ಹೊರತಾಗಿಯೂ ವಿನಯ್ ಕುಲಕರ್ಣಿ ವಿರುದ್ಧ ಖಾಸಗಿ ವಾಹಿನಿ, ಫೇಸ್‌ಬುಕ್, ಯೂಟ್ಯೂಬ್ ಮತ್ತು ವಾಟ್ಸಾಪ್ ಆಕ್ಷೇಪಾರ್ಹ ಸುದ್ದಿ ಬಿತ್ತರಿಸುವದು ನ್ಯಾಯಾಂಗ ನಿಂದನೆಯಾಗಲಿದೆ ಎಂದು ಅದು ತಿಳಿಸಿದೆ.
ವಿನಯ ಕುಲಕರ್ಣಿ ವಿರುದ್ಧ ಆಕ್ಷೇಪಾರ್ಹ, ಆಧಾರರಹಿತ, ವ್ಯಂಗ್ಯಭರಿತ ಸುದ್ದಿ, ಚಿತ್ರ, ವಿಡಿಯೊ ಲೇಖನ ಪ್ರಕಟಿಸದಂತೆ 2024ರ ಸೆಪ್ಟೆಂಬರ್ 27ರಂದು ಬೆಂಗಳೂರಿನ 20ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಸಾಮಾಜಿಕ ಮಾಧ್ಯಮಗಳು ಸೇರಿ 30 ಮುಖ್ಯವಾಹಿನಿ ಮಾಧ್ಯಮಗಳ ವಿರುದ್ಧ ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡಿತ್ತು.
Author: Karnataka Files
Post Views: 8





