Download Our App

Follow us

Home » ರಾಜಕೀಯ » 5 ಲಕ್ಷ ಪರಿಹಾರ ಕೊಡಲು ಆರಂಭಿಸಿದ ಮೇಲೆ ರೈತ ಆತ್ಮಹತ್ಯೆಗಳು ಜಾಸ್ತಿಯಾಗಿವೆಯಂತೆ. ಸಚಿವರ ಉದ್ದಟನದ ಹೇಳಿಕೆ.

5 ಲಕ್ಷ ಪರಿಹಾರ ಕೊಡಲು ಆರಂಭಿಸಿದ ಮೇಲೆ ರೈತ ಆತ್ಮಹತ್ಯೆಗಳು ಜಾಸ್ತಿಯಾಗಿವೆಯಂತೆ. ಸಚಿವರ ಉದ್ದಟನದ ಹೇಳಿಕೆ.

ಸರ್ಕಾರ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಲು ಆರಂಭಿಸಿದ ಬಳಿಕ ಹೆಚ್ಚು ಆತ್ಮಹತ್ಯೆಗಳು ನಡೆಯುತ್ತಿವೆ ಎಂದು ಸಚಿವ ಶಿವಾನಂದ ಪಾಟೀಲ್ ಉದ್ದಟತನದ ಹೇಳಿಕೆ ನೀಡಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಶಿವಾನಂದ ಪಾಟೀಲ್, ಲವ್ ಕೇಸಗಳನ್ನು ರೈತ ಆತ್ಮಹತ್ಯೆ ಕೇಸ್ ಎಂದು ವರದಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ರೈತರು ವ್ಯವಸಾಯ ಮಾಡುವವರು, ಹೊರತಾಗಿ ಲವ್ ಮಾಡುವವರಲ್ಲ ಅನ್ನೋ ಜ್ಞಾನ ಸಚಿವರಿಗೆ ಬೇಕಿತ್ತು. ಮತ್ತಷ್ಟು ಮುಂದುವರಿದ ಅವರು ಹಾವೇರಿ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಗಳು ಹೊಸದೇನಲ್ಲ ಎಂದು ಹೇಳುವ ಮೂಲಕ ರೈತ ಕುಲದ ಅಪಮಾನ ಮಾಡಿದಂತಾಗಿದೆ.

2015 ರ ಬಳಿಕ ಅತೀ ಹೆಚ್ಚು ರೈತ ಆತ್ಮಹತ್ಯೆಗಳು ನಡೆಯುತ್ತಿವೆ. ರೈತ ಸಂಘಟನೆಯವರು ಸತ್ತವನ ಮನೆಗೆ ಪರಿಹಾರ ಸಿಗಲಿ ಅನ್ನೋ ಕಾರಣಕ್ಕೆ ಕುಡಿದು ಸತ್ತವರನ್ನು ಸಹ ರೈತ ಆತ್ಮಹತ್ಯೆಯಂದು ಬಿಂಬಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದರು. 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ವಿನಯ ಕುಲಕರ್ಣಿ ಶಾಸಕ ಸ್ಥಾನ ರದ್ದು ವಿಚಾರ : ಯು ಟಿ ಖಾದರ ಹೇಳಿದ್ದಿಷ್ಟು

ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ವಿನಯ ಕುಲಕರ್ಣಿಯವರ ಶಾಸಕ ಸ್ಥಾನದ ರದ್ದು ಕುರಿತು ವಿಧಾನಸಭಾಧ್ಯಕ್ಷ ಯು ಟಿ ಖಾದರ ಅವರು ಮಾತನಾಡಿದ್ದಾರೆ. ಕೋರ್ಟನಿಂದ ಇನ್ನೂವರೆಗೆ ಅಧಿಕೃತ

Live Cricket

error: Content is protected !!