Download Our App

Follow us

Home » ಅಪರಾಧ » ಬೀದರ್ ಜಿಲ್ಲೆಯ ರೈತರ ಜೀವನಾಡಿ‌ ಕಾರಂಜಾ ಡ್ಯಾಂ ಕ್ಯಾಟ್ ಫೀಶ್ ಗಳ ತಾಣ*

ಬೀದರ್ ಜಿಲ್ಲೆಯ ರೈತರ ಜೀವನಾಡಿ‌ ಕಾರಂಜಾ ಡ್ಯಾಂ ಕ್ಯಾಟ್ ಫೀಶ್ ಗಳ ತಾಣ*

ಬೀದರ ಜಿಲ್ಲೆಯ ರೈತರ ಜೀವನಾಡಿ ಕಾರಂಜಾ ಡ್ಯಾಮ್ ನಲ್ಲಿ ನಿಷೇಧಿತ ಕ್ಯಾಟ್ ಫೀಶ್ ಗಳ ಹಾವಳಿ ಜೋರಾಗಿದೆ.  ಕಳೆದ‌ ವರ್ಷ ‌ಕ್ಯಾಟ್ ಫೀಶ್ ಅನ್ನ ಖೇಣಿ ರಂಜೋಳ ಮತ್ತು ಮರ್ಕಲ್ ಬಳಿ ಬೆಳೆಯಲಾಗಿತ್ತು ಎನ್ನಲಾಗಿದೆ. ಅದಕ್ಕೆ ಹೈದರಾಬಾದ್ ನ ನಾನ್ ವೆಜ್ ಹೋಟಲ್ ಗಳಲ್ಲಿ ಅಳಿದುಳಿದ ನಾನ್ ವೆಜ್ ಆಹಾರವನ್ನು ಟ್ಯಾಂಕರ್ ಮುಖಾಂತರ ತಂದು ಸುರಿಯುತ್ತಿದ್ದರು ಎಂದು ಹೇಳಲಾಗಿದೆ. ಅದು ಕ್ರಮೇಣ ಕಾರಂಜಾ ಡ್ಯಾಮ್ ನಲ್ಲಿಯೂ ಸೇರ್ತಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

ಮಾಧ್ಯಮಗಳ ಸುದ್ದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ಕೊನೆಗೆ ಅವುಗಳನ್ನು ನಾಶ ಮಾಡಿ ಪ್ರಕರಣ ದಾಖಲು ‌ಮಾಡಿದ್ದರು ಸಹ ಈಗ ಮತ್ತೆ ಅಲ್ಲಿ ಅವು ತಲೆ ಎತ್ತಿವೆ. ಈ ಸಲ ಕ್ಯಾಟ್ ಪೀಶ್ ಅಲ್ಲ ಸಾಧಾರಣ ಮೀನುಗಳನ್ನ ಬೆಳಸುತ್ತವೆ ಅಂತಾ ಮೀನುಗಾರಿಕೆ ಇಲಾಖೆಯಾಗಲಿ ಕಾರಂಜಾ ಅಧಿಕಾರಿಗಳಿಂದ ಆಗಲಿ ಅನುಮತಿ ಪಡೆಯದೆ ಅದೇ ಹೈದ್ರಾಬಾದ್ ಮೂಲದ ವ್ಯಕ್ತಿ ಅಲ್ಲಿಯೇ ಸಾಧಾರಣ‌ ಮೀನುಗಳ ಸೋಗಿನಲ್ಲಿ ಕ್ಯಾಟ್ ಪೀಶ್ ಮೀನುಗಳನ್ನ ಬೆಳಸಲು ಮುಂದಾಗಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಆಕ್ರಮವಾಗಿ ನಡೆದಿರುವ ಈ ದಂಧೆಯನ್ನು ಬೀದರ ಜಿಲ್ಲಾಡಳಿತ ಮಟ್ಟ ಹಾಕಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

 

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ವಿಧಾನಸಭಾ ಕ್ಷೇತ್ರದ ಮೂರು ತಾಲೂಕು ಬರಪೀಡಿತ ಘೋಷಣೆ: ಧಾರವಾಡ ತಾಲೂಕು ನಿರ್ಲಕ್ಷ್ಯ ಆರೋಪ

ನವಲಗುಂದ: ಮಳೆ ಅಭಾವದ ಹಿನ್ನೆಲೆಯಲ್ಲಿ ಸರ್ಕಾರ ಎರಡನೇ ಹಂತದಲ್ಲಿ ರಾಜ್ಯದ 24 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳು

Live Cricket

error: Content is protected !!