Download Our App

Follow us

Home » ಕಾನೂನು » ಧಾರವಾಡ ಬಳಿ ಭೀಕರ ಅಪಘಾತ, ಸ್ಥಳದಲ್ಲಿಯೇ ಪೊಲೀಸ್ ದುರ್ಮರಣ.

ಧಾರವಾಡ ಬಳಿ ಭೀಕರ ಅಪಘಾತ, ಸ್ಥಳದಲ್ಲಿಯೇ ಪೊಲೀಸ್ ದುರ್ಮರಣ.

ಛಬ್ಬಿ ಗಣೇಶನ ಬಂದೋಬಸ್ತ ಮುಗಿಸಿ ಗರಗ ಠಾಣೆಗೆ ಮರಳುತ್ತಿದ್ದ ಪೊಲೀಸ್ ಪೇದೆ ಹುಚ್ಚೇಶ್ ಹಿರೇಗೌಡರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಶರೀರ ಛಿದ್ರ ಛಿದ್ರವಾಗಿದ್ದು, ಅಪರಿಚಿತ ವಾಹನ ಡಿಕ್ಕಿ ಹೊಡೆದು ಹೋಗಿದೆ ಎನ್ನಲಾಗಿದೆ. ಈ ದುರ್ಘಟನೆ ರಮ್ಯಾ ರೆಸಿಡೆನ್ಸಿ ಬಳಿ ನಡೆದಿದೆ. ಹುಚ್ಚೇಶನ ಜೊತೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಲಕ್ಷ್ಮೀ ಎಂಬ ಮಹಿಳಾ ಪೇದೆ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಹುಬ್ಬಳ್ಳಿ ಧಾರವಾಡ ಬೈಪಾಸ ಸಾವಿನ ರಸ್ತೆಯಾಗಿದ್ದು, ಘಟನೆ ನಡೆದ ಸ್ಥಳದಲ್ಲಿ ಮೇಲಿಂದ ಮೇಲೆ ಅಪಘಾತಗಳು ಸಂಭವಿಸಿ, ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ದೌಡಾಯಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಸಮಾಜಶಾಸ್ತ್ರ ವಿಭಾಗದಲ್ಲಿ 8 ಚಿನ್ನದ ಪದಕ ಪಡೆದ ಹಿಜಾಬ್ ಹುಡುಗಿ

ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಇಂದು ನಡೆದ ಘಟಿಕೋತ್ಸವದಲ್ಲಿ ಹಿಜಾಬ್ ಹುಡುಗಿ ಅಪ್ರತಿಮ ಸಾಧನೆ ಮಾಡಿದ್ದಾಳೆ. ಸಮೀನಾ ಕೌಸರ  ಮೊಹಮ್ಮದ ಜಾಫರ ಕರ್ನುಲ್ ಎಂಬ ವಿಧ್ಯಾರ್ಥಿನಿ ಸಮಾಜಶಾಸ್ತ್ರ ವಿಭಾಗದಲ್ಲಿ

Live Cricket

error: Content is protected !!