Download Our App

Follow us

Home » ಕಾನೂನು » ಪ್ರಮೋದ ಮುತಾಲಿಕ ಅವರನ್ನು ರಾಜ್ಯದಿಂದಲೇ ಗಡಿಪಾರು ಮಾಡಿ. ಧಾರವಾಡ ಅಂಜುಮನ್ ಸಂಸ್ಥೆ ಆಗ್ರಹ.

ಪ್ರಮೋದ ಮುತಾಲಿಕ ಅವರನ್ನು ರಾಜ್ಯದಿಂದಲೇ ಗಡಿಪಾರು ಮಾಡಿ. ಧಾರವಾಡ ಅಂಜುಮನ್ ಸಂಸ್ಥೆ ಆಗ್ರಹ.

ಪ್ರಚೋದನಾತ್ಮಕ ಹೇಳಿಕೆ ಕೊಡುವ ಮೂಲಕ ಕೋಮು ಸಂಘರ್ಷಕ್ಕೆ ಯತ್ನಿಸುತ್ತಿರುವ ಶ್ರೀರಾಮ ಸೇನೆಯ ಪ್ರಮೋದ ಮುತಾಲಿಕರನ್ನು ರಾಜ್ಯದಿಂದಲೇ ಗಡಿಪಾರು ಮಾಡುವಂತೆ ಧಾರವಾಡ ಅಂಜುಮನ್ ಸಂಸ್ಥೆ ಆಗ್ರಹಿಸಿದೆ.

ಧಾರವಾಡ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಗ್ರಹಿಸಿರುವ ಅಂಜುಮನ್ ಸಂಸ್ಥೆ ಸದಸ್ಯರು, ಕರ್ನಾಟಕ ರಾಜ್ಯ ನೆಮ್ಮದಿಯಿಂದ ಇದೆ. ಮಸೀದಿಗಳಲ್ಲಿ ಗಣೇಶನ ಮೂರ್ತಿ ಇಡುವ ಹೇಳಿಕೆ, ಮುಸ್ಲಿಂರನ್ನು ದೇಶದ್ರೋಹಿ ಎಂದು ಕರೆಯುವದನ್ನು, ಅಂಜುಮನ್ ಇಸ್ಲಾಂ ಖಂಡಿಸುತ್ತದೆ ಎಂದು ಅಂಜುಮನ್ ಪದಾಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ಪ್ರಮೋದ ಮುತಾಲಿಕ ಮೇಲೆ ಕ್ರಮ ಕೈಗೊಳ್ಳದೆ ಹೋದರೆ, ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದ್ದಾರೆ. ಅಂಜುಮನ ಅಧ್ಯಕ್ಷ ಇಕ್ಬಾಲ್ ಜಮಾದಾರ, ನಜೀರ ಮನಿಯಾರ್ ಸೇರಿದಂತೆ ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು ಅಪರ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಿನಯ ಕುಲಕರ್ಣಿ ಶಾಸಕ ಸ್ಥಾನ ರದ್ದು ವಿಚಾರ : ಯು ಟಿ ಖಾದರ ಹೇಳಿದ್ದಿಷ್ಟು

ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ವಿನಯ ಕುಲಕರ್ಣಿಯವರ ಶಾಸಕ ಸ್ಥಾನದ ರದ್ದು ಕುರಿತು ವಿಧಾನಸಭಾಧ್ಯಕ್ಷ ಯು ಟಿ ಖಾದರ ಅವರು ಮಾತನಾಡಿದ್ದಾರೆ. ಕೋರ್ಟನಿಂದ ಇನ್ನೂವರೆಗೆ ಅಧಿಕೃತ

Live Cricket

error: Content is protected !!