Download Our App

Follow us

Home » ರಾಜಕೀಯ » ಯಾರೇ ಕೂಗಾಡಲಿ, ಊರೇ ಹೋರಾಡಲಿ, ಅಣ್ಣಿಗೇರಿಯ ನೆಮ್ಮದಿಗೆ ಸಾಟಿ ಇಲ್ಲ……ಕೋನರೆಡ್ಡಿಯವರ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೇಸ್ ಬಾವುಟ ಹಿಡಿದು ಮೆರವಣಿಗೆ..

ಯಾರೇ ಕೂಗಾಡಲಿ, ಊರೇ ಹೋರಾಡಲಿ, ಅಣ್ಣಿಗೇರಿಯ ನೆಮ್ಮದಿಗೆ ಸಾಟಿ ಇಲ್ಲ……ಕೋನರೆಡ್ಡಿಯವರ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೇಸ್ ಬಾವುಟ ಹಿಡಿದು ಮೆರವಣಿಗೆ..

ತೀವ್ರ ಕುತೂಹಲ ಕೆರಳಿಸಿದ್ದ ಅಣ್ಣಿಗೇರಿ ಪುರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೇಸ್, ಬಿಜೆಪಿ, ಪಕ್ಷೇತರರು ಒಂದಾಗಿ, ಕಾಂಗ್ರೇಸ್ ಅಧಿಕೃತ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ಇದರ ಬೆನ್ನಲ್ಲೇ ಅಣ್ಣಿಗೇರಿಯಲ್ಲಿ ಗೆದ್ದು ಬಿಗಿದ ಕಾಂಗ್ರೇಸ್ ಅಭ್ಯರ್ಥಿಯ ವಿಜಯೋತ್ಸವದಲ್ಲಿ ಬಿಜೆಪಿ ಹಾಗೂ ಕಾಂಗ್ರೇಸ್ ಭಾವುಟಗಳು ಒಟ್ಟಿಗೆ ಹಾರಾಡಿವೆ.

ಪಕ್ಷೇತರರ ಹಾಗೂ ಬಿಜೆಪಿ ಸದಸ್ಯರ ಬೆಂಬಲದಿಂದ ನೂತನ ಅಧ್ಯಕ್ಷೆಯಾಗಿ ಮೆಹಬೂಬಿ ನವಲಗುಂದರ ಮೆರವಣಿಗೆಯಲ್ಲಿ ಪ್ರಮುಖ ರಾಜಕೀಯ ಎದುರಾಳಿ ಬಿಜೆಪಿ ಹಾಗೂ ಕಾಂಗ್ರೇಸ್ ಬಾವುಟಗಳು ಹಾರಾಡಿದ್ದು, ಗಮನ ಸೆಳೆದವು.

ನವಲಗುಂದ ಕಾಂಗ್ರೇಸ್ ಶಾಸಕ ಎನ್ ಎಚ್ ಕೋನರೆಡ್ಡಿಯವರ ಕ್ಷೇತ್ರದಲ್ಲಿ ಸರಳವಾಗಿ ಅಧಿಕಾರ ಪಡೆಯಬೇಕಿದ್ದ ಕಾಂಗ್ರೇಸ್, ಸ್ಥಳೀಯ ಸದಸ್ಯರ ವಿಶ್ವಾಸ ಗಳಿಸದ ಹಿನ್ನೆಲೆಯಲ್ಲಿ ಬಿಜೆಪಿ ಲಾಭ ಪಡೆದುಕೊಂಡಿದೆ. ನಾವೇ ಕಾಂಗ್ರೇಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದೇವೆಂದು ಬಿಜೆಪಿ ಸದಸ್ಯರು ಬೀಗಿರುವ ಘಟನೆ ನಡೆದಿದೆ.

ರಾಜ್ಯದಲ್ಲಿ ಬಿಜೆಪಿ ಕಟ್ಟಿಹಾಕಲು ಕಾಂಗ್ರೇಸ್ ನಾಯಕರು ಯತ್ನಿಸುತ್ತಿದ್ದಾರೆ. ಆದರೆ ನವಲಗುಂದ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೇಸ್ ಭಾಯಿ ಭಾಯಿಯಾಗಿದ್ದು, ರಾಜಕೀಯ ವಲಯಗಳಲ್ಲಿ ಚರ್ಚೆಯಾಗುತ್ತಿದೆ.

 

 

 

Karnataka Files
Author: Karnataka Files

Leave a Comment

RELATED LATEST NEWS

error: Content is protected !!