ತೀವ್ರ ಕುತೂಹಲ ಮೂಡಿಸಿದ್ದ ಅಣ್ಣಿಗೇರಿ ಪುರಸಭೆಯ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿಯವರಿಗೆ ಮುಖಭಂಗವಾಗಿದೆ. ಕಣದಲ್ಲಿದ್ದ ಕಾಂಗ್ರೇಸ್ಸಿನ ಅಧಿಕೃತ ಅಭ್ಯರ್ಥಿಗೆ ಸೋಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಪಕ್ಷೇತರರ ಬೆಂಬಲದೊಂದಿಗೆ ಕಾಂಗ್ರೇಸ್ಸಿನ ಮೆಹಬೂಬಿ ನವಲಗುಂದ ಅಣ್ಣಿಗೇರಿ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮೆಹಬೂಬಿಯವರಿಗೆ ಕಾಂಗ್ರೇಸ್ಸಿನ 4, ಬಿಜೆಪಿಯ 5 ಹಾಗೂ 4 ಪಕ್ಷೇತರರ ಮತ ಬಿದ್ದಿವೆ. ಅಣ್ಣಿಗೇರಿಯಲ್ಲಿ ಕೈ, ಕಮಲಕ್ಕೆ ಪಕ್ಷೇತರರು ಸಾಥ ಕೊಟ್ಟಿದ್ದಾರೆ.
ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ಎಡುವಿದ ಶಾಸಕ ಕೋನರೆಡ್ಡಿ.
ಅಣ್ಣಿಗೇರಿ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ನವಲಗುಂದ ಕಾಂಗ್ರೇಸ್ ಶಾಸಕ ಎನ್ ಎಚ್ ಕೋನರೆಡ್ಡಿ ಎಡವಿದ್ದಾರೆ. 2 b ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಮಹಿಳೆಯರು ಆಕಾಂಕ್ಷಿಗಳಾಗಿದ್ದರು. ಇಬ್ಬರು ಮಹಿಳೆಯರನ್ನು ಒಂದೆಡೆ ಸೇರಿಸಿ, ಒಮ್ಮತದ ಆಯ್ಕೆ ಮಾಡಬೇಕಿದ್ದ ಶಾಸಕರು ಸುಮ್ಮನೆ ಕುಳಿತಿದ್ದು, ಮುಖಭಂಗಕ್ಕೆ ಕಾರಣವಾಗಿದೆ.
ಹಠ ಸಾಧಿಸಿದ ಈಶ್ವರ ಬಾಬಾ

ಕಾಂಗ್ರೇಸ್ ಟಿಕೇಟ್ ನಿಂದ ವಂಚಿತಗೊಂಡು ಪಕ್ಷೇತರನಾಗಿ ಆಯ್ಕೆಯಾಗಿ ಕಾಂಗ್ರೇಸ್ಸಿಗೆ ಬೆಂಬಲ ಸೂಚಿಸಿದ್ದ ಬಾಬಾಜಾನ ಮುಲ್ಲಾ, ಮತ್ತು ಈಶ್ವರ ಕಾಳಪ್ಪನವರ, ತಮ್ಮ ನೇತೃತ್ವದಲ್ಲಿ 13 ಜನ ಸದಸ್ಯರನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾಗಿದ್ದರು. ಅಧ್ಯಕ್ಷ ಸ್ಥಾನವನ್ನು ತಮ್ಮ ಗುಂಪಿಗೆ ಬರುವ ಹಾಗೆ ಇಬ್ಬರು ಜಾಣ್ಮೆ ಮೆರೆದಿದ್ದಾರೆ. ಪರಿಣಾಮ ಬಾಬಾಜಾನ ಮುಲ್ಲಾ ಹಾಗೂ ಈಶ್ವರ ಕಾಳಪ್ಪನವರ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ.
ಅಣ್ಣಿಗೇರಿಯ ಅಭಿವೃದ್ದಿಯ ವಿಷಯದಲ್ಲಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಾದ ಜವಾಬ್ದಾರಿ ನೂತನ ಅಧ್ಯಕ್ಷೆ ಮೇಲಿದೆ.






