Download Our App

Follow us

Home » ಭಾರತ » ಗೋಕರ್ಣದಲ್ಲಿ ಸಮುದ್ರ ಪಾಲಾಗುತ್ತಿದ್ದ ಹುಬ್ಬಳ್ಳಿಯ 8 ಜನರ ರಕ್ಷಣೆ.

ಗೋಕರ್ಣದಲ್ಲಿ ಸಮುದ್ರ ಪಾಲಾಗುತ್ತಿದ್ದ ಹುಬ್ಬಳ್ಳಿಯ 8 ಜನರ ರಕ್ಷಣೆ.

ಉತ್ತರ ಕನ್ನಡದ ಗೋಕರ್ಣದ ಕಡಲತೀರದಲ್ಲಿ ಸಮುದ್ರ ಪಾಲಾಗುತ್ತಿದ್ದ ಹುಬ್ಬಳ್ಳಿಯ 8 ಜನರನ್ನು ಲೈಫ್ ಗಾರ್ಡ್ ಸಿಬ್ಬಂದಿ ಪಾರು ಮಾಡಿದ್ದಾರೆ. ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದಿದ್ದ ಹುಬ್ಬಳ್ಳಿಯ ಪರಶುರಾಮ ಕುಟುಂಬದ 7 ಜನ ಸದಸ್ಯರು ಸಮುದ್ರದಲ್ಲಿ ಈಜಲು ಹೋಗಿದ್ದರು.

ಜೋರಾಗಿ ತೆರೆಗಳು ಅಪ್ಪಳಿಸಿದ್ದರಿಂದ ಕಡಲಾಚೆಗೆ ಬರಲು ಯತ್ನಿಸಿದ್ದಾರೆ. ಅಲ್ಲೇ ಇದ್ದ ಲೈಫ್ ಗಾರ್ಡ್ ಸಿಬ್ಬಂದಿ ತಕ್ಷಣ ಸಮುದ್ರಕ್ಕೆ ಇಳಿದು, ಪರಶುರಾಮ (44) ರುಕ್ಷ್ಮಿಣಿ ( 38) ಧೀರಜ ( 14) ಅಕ್ಷರ (14) ಖುಷಿ ( 13) ದೀಪಿಕಾ ( 12 ) ನಂದ ಕಿಶೋರ ( 10 ) ಎಲ್ಲರನ್ನು ಲೈಫ್ ಗಾರ್ಡ್ ಸಿಬ್ಬಂದಿ ಬಚಾವ ಮಾಡಿದ್ದಾರೆ. ಪಿಂಡ ಪ್ರಧಾನ ಮಾಡಲು ಬಂದಿದ್ದ ಎಲ್ ವಿ ಪಾಟೀಲ್ ರನ್ನು ಸಹ ರಕ್ಷಣೆ ಮಾಡಲಾಗಿದೆ.

ಸಮುದ್ರದಲ್ಲಿ ಮುಳುಗುತ್ತಿದ್ದ ಹುಬ್ಬಳ್ಳಿಯ ಒಂದೆ ಕುಟುಂಬದ 7 ಜನರನ್ನು ಹಾಗೂ ಪಿಂಡ ಪ್ರಧಾನ ಮಾಡಲು ಬಂದಿದ್ದ ಓರ್ವ ವ್ಯಕ್ತಿಯನ್ನು ಲೈಫ್ ಗಾರ್ಡ್ ಸಿಬ್ಬಂದಿಗಳಾದ ಶಿವಪ್ರಸಾದ ಅಂಬಿಗ, ಲೋಕೇಶ, ಹರಿಕಾಂತ ಎಂಬುವವರು ಎಲ್ಲ 8 ಜನರನ್ನು ರಕ್ಷಣೆ ಮಾಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!