ಕರ್ನಾಟಕ ಹಾಲು ಮಹಾಮಂಡಳ, ಪಶು ಆಹಾರ ತಯಾರಿಕೆಗಾಗಿ ಒಂದು ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ರೈತರಿಂದ ನೇರವಾಗಿ ಬೆಂಬಲ ಬೆಲೆಯಲ್ಲಿ ಖರೀದಿಸಲು ತೀರ್ಮಾನಿಸಿದೆ. ಮೂಲದರಕ್ಕೆ ₹160ರಂತೆ ಹೆಚ್ಚುವರಿ ದರ ನೀಡಿ, ಪ್ರತಿ ಕ್ವಿಂಟಾಲ್‌ಗೆ ₹2,250 ರಂತೆ ಖರೀದಿಸಲು ಉದ್ದೇಶಿಸಲಾಗಿದೆ. ನವೆಂಬರ್ 13ರಿಂದ ಮೆಕ್ಕೆಜೋಳ ಖರೀದಿಗಾಗಿ ನೋಂದಣಿ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು KMF ತಿಳಿಸಿದೆ. ಆದರೆ ಎಲ್ಲೆಲ್ಲಿ ಖರೀದಿ ಕೇಂದ್ರ ತೆರೆಯಲಾಗುತ್ತದೆ ಅನ್ನೋದರ ಬಗ್ಗೆ ಮಾಹಿತಿ ನೀಡಿಲ್ಲ.
Author: Karnataka Files
Post Views: 160





