ಧಾರವಾಡದ ಬಿಜೆಪಿ ಕಾರ್ಯಕರ್ತನಿಗೆ ಇನ್ಸಪೆಕ್ಟರ ಅವರು ಹೊಡೆದಿದ್ದಾರೆ ಎಂದು ಆರೋಪಿಸಿ, ಶಹರ ಠಾಣೆ ಇನ್ಸಪೆಕ್ಟರಗೆ ಬೆದರಿಕೆ ಹಾಕಿದ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ವರ್ತನೆಗೆ ಖಂಡನೆ ವ್ಯಕ್ತವಾಗಿದೆ.
ರಾಜ್ಯ ಯುವ ಕಾಂಗ್ರೇಸ್ ಸಮಿತಿ ಈ ಘಟನೆಯನ್ನು ಖಂಡಿಸಿದ್ದು, ಕೇಂದ್ರ ಸಚಿವರಾದವರು ಹೀಗೆ ಒಬ್ಬ ಪೊಲೀಸ್ ಅಧಿಕಾರಿಯನ್ನು ಸರಿಯಾಗಿ ನಡೆಸಿಕೊಂಡು ಜನರಿಗೆ ಮಾದರಿಯಾಗಬೇಕು ಎಂದು ರಾಜ್ಯ ಯುವ ಕಾಂಗ್ರೇಸ್ ಉಪಾಧ್ಯಕ್ಷ ಅಬ್ದುಲ್ ದೇಸಾಯಿ ತಿಳಿಸಿದ್ದಾರೆ. ಜೋಶಿಯವರ ನಡವಳಿಕೆಯನ್ನು ರಾಜ್ಯ ಯುವ ಕಾಂಗ್ರೇಸ್ ಖಂಡಿಸುವದಾಗಿ ಹೇಳಿದ ರಾಜ್ಯ ಉಪಾಧ್ಯಕ್ಷ ಅಬ್ದುಲ್ ದೇಸಾಯಿ, ಕೇಂದ್ರ ಸಚಿವರು ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ. ದೀಪಾವಳಿ ಹಬ್ಬದ ನಂತರ ಯುವ ಕಾಂಗ್ರೇಸ್, ಕೇಂದ್ರ ಸಚಿವರ ವಿರುದ್ಧ ಪ್ರತಿಭಟನೆ ನಡೆಸಲಿದೆ ಎಂದು ದೇಸಾಯಿ ಎಚ್ಚರಿಸಿದ್ದಾರೆ.
Author: Karnataka Files
Post Views: 10





