ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಧಾರವಾಡ ಶಹರ ಠಾಣೆ ಇನ್ಸಪೆಕ್ಟರ ಜೊತೆ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ನಡೆದುಕೊಂಡ ರೀತಿಯ ಬಗ್ಗೆ ನಾಗೇಶ ಕಲಬುರಗಿ ಕಿಡಿ ಕಾರಿದ್ದಾರೆ. ಇನ್ಸಪೆಕ್ಟರ ತಪ್ಪು ಮಾಡಿದರೆ, ಕಚೇರಿ ಒಳಗಡೆ ಕರೆದು ಹೇಳಬೇಕಿತ್ತು. ಹೀಗೆ ಒಬ್ಬ ಸರ್ಕಾರಿ ಅಧಿಕಾರಿಯನ್ನು ಕಾರ್ಯಕರ್ತರ ಮುಂದೆ ಅವಮಾನಿಸುವದು ಅವರಿಗೆ ಶೋಭೆ ತರಲ್ಲ ಎಂದು ಹೇಳಿದ್ದಾರೆ. ಒಬ್ಬ ಕೇಂದ್ರ ಸಚಿವ ಈ ರೀತಿ ಎಲ್ಲರ ಎದುರು ಧಮಕಿ ಹಾಕಿದರೆ, ಜನಸಾಮಾನ್ಯರು ಪೊಲೀಸರ ಜೊತೆ ಹೇಗೆ ನಡೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಸಚಿವ ಪ್ರಲ್ಲಾದ ಜೋಶಿಯವರ ದುಂಡಾವರ್ತನೆ ಬಗ್ಗೆ ಪ್ರಧಾನಿಗೆ ಪತ್ರ ಬರೆಯುವದಾಗಿ ಹೇಳಿರುವ ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರಗಿ, ಪ್ರಧಾನಿಯವರಿಗೆ ಆ ವಿಡಿಯೋ ಕಳಿಸುತ್ತೇನೆ ಎಂದಿದ್ದಾರೆ.
Author: Karnataka Files
Post Views: 6





