Download Our App

Follow us

Home » ಕಾನೂನು » ಸ್ಲಮ್ ಸಿಟಿ ಆಗುತ್ತಿದೆ ಹುಬ್ಬಳ್ಳಿ ಧಾರವಾಡ ಸ್ಮಾರ್ಟ ಸಿಟಿ. ನಿದ್ದೆಯಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರ

ಸ್ಲಮ್ ಸಿಟಿ ಆಗುತ್ತಿದೆ ಹುಬ್ಬಳ್ಳಿ ಧಾರವಾಡ ಸ್ಮಾರ್ಟ ಸಿಟಿ. ನಿದ್ದೆಯಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರ

ನೀವು, ನಮ್ಮ ಹುಬ್ಬಳ್ಳಿ ಧಾರವಾಡ, ಸಿಂಗಾಪುರ ಆಗಬೇಕು ಎಂದು ಕನಸು ಕಟ್ಟಿಕೊಂಡಿದ್ದರೆ ಅದು ನಿಮ್ಮ ದೊಡ್ಡ ತಪ್ಪು. ಅಂತದೊಂದು ವಾತಾವರಣ ಇದೀಗ ಹುಬ್ಬಳ್ಳಿ ಧಾರವಾಡದಲ್ಲಿ ನಿರ್ಮಾಣವಾಗಿದೆ. ಅದಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರ ನೀರೆರೆಯುತ್ತಿದೆ.

ವೇಗವಾಗಿ ಬೆಳೆಯುತ್ತಿರುವ ಹುಬ್ಬಳ್ಳಿ ಧಾರವಾಡದಲ್ಲಿ ವಸತಿ ವಿನ್ಯಾಸಗಳನ್ನು ಅಭಿವೃದ್ಧಿ ಪಡಿಸುವದನ್ನು ಬಿಟ್ಟು, ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಕಚೇರಿಯಲ್ಲಿ ಬೆಣ್ಣೆ ಹೊಡೆಯುತ್ತಾ ಕುಂತಿದ್ದಾರೆ. 

ಹುಬ್ಬಳ್ಳಿ ಧಾರವಾಡ ಮಹಾನಗರ, ಸ್ಮಾರ್ಟ ಸಿಟಿ ಯೋಜನೆಯಡಿ ಆಯ್ಕೆಯಾಗಿದೆ. ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಅವಳಿ ನಗರ ಅಂದವಾಗಿ ಕಾಣಲು ಸಾಕಷ್ಟು ಹಣ ವ್ಯಯಿಸಲಾಗುತ್ತಿದ್ದರು ಸಹ, ಸ್ಮಾರ್ಟ ಸಿಟಿ, ಸ್ಲಮ್ ಸಿಟಿಯಾಗುತ್ತಿದೆ. 

ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಧ್ಯ ಆಯುಕ್ತರಾದ ಬಿರಾದಾರ, ಕಚೇರಿ ಬಿಟ್ಟು ಫಿಲ್ಡ್ ಗೆ ಬರದೇ ಇರೋದು, ಇದರ ಹಿಂದೆ ನಡೆದಿದ್ದಾದರೂ ಏನು ಅನ್ನೋದರ ಕುರಿತು ಹಲವು ಆಯಾಮಗಳಲ್ಲಿ ಸಂಶಯ ಹುಟ್ಟಿ ಹಾಕಿದೆ. 

Karnataka Files
Author: Karnataka Files

Leave a Comment

RELATED LATEST NEWS

error: Content is protected !!